ಕರ್ನಾಟಕ

karnataka

ETV Bharat / state

ಹಂಪಿಗೆ ಕುಟುಂಬ ಸಮೇತ ಭೇಟಿ ನೀಡಿದ ಬಳ್ಳಾರಿ ಜಿಲ್ಲಾ ನ್ಯಾಯಾಧೀಶರು

ಐತಿಹಾಸಿಕ ಸ್ಥಳ ಹಂಪಿಗೆ ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಬಿ.ಅಸೂಡೆ ಅವರು ಕುಟುಂಬ ಸಮೇತ ಭೇಟಿ ನೀಡಿದ್ರು. ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಕೂಡ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ್ರು.

HAMPI
ಹಂಪಿ

By

Published : Oct 11, 2020, 4:43 PM IST

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಬಿ. ಅಸೂಡೆ ಅವರು ಕುಟುಂಬ ಸಮೇತ ಭೇಟಿ ನೀಡಿ, ವೀಕ್ಷಣೆ ಮಾಡಿದರು.

ಹಂಪಿ

ಮೊದಲು ವಿರೂಪಾಕ್ಷೇಶ್ವರನ ದರ್ಶನ ಪಡೆದು, ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನ ಮಾಡಿದರು. ನಂತರ ಬಸವಣ್ಣ, ಕೋದಂಡರಾಮ ದೇವಸ್ಥಾನ, ಸಾಸುವೆಕಾಳು ಹಾಗೂ ಕಡಲೆಕಾಳು ಗಣೇಶನ, ಕೃಷ್ಣಬಜಾರ್, ಸಾಲುಮಂಟಪ, ಉಗ್ರನರಸಿಂಹ, ಮಹಾನವಮಿದಿಬ್ಬ, ರಾಣಿ ಸ್ನಾನಗೃಹ, ಲೋಟಸ್ ಮಹಲ್, ವಿಜಯ ದೇವಸ್ಥಾನ ಹಾಗೂ ಕಲ್ಲಿನ ರಥ ಸೇರಿದಂತೆ ನಾನಾ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಗೈಡ್​ಗಳಿಂದ ಸ್ಮಾರಕಗಳ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಅಟಲ್ ಬಿಹಾರಿ ವಾಜಪೇಯಿ ಜ್ಯೂಲಾಜಿಕಲ್ ಪಾರ್ಕ್ ನೋಡಲು ತೆರಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ:

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಕೂಡ ಭೇಟಿ ನೀಡಿದರು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನದ ಇತಿಹಾಸವನ್ನು ಗೈಡ್​ನಿಂದ ತಿಳಿದುಕೊಂಡರು.

For All Latest Updates

ABOUT THE AUTHOR

...view details