ಬಳ್ಳಾರಿ: ಮಹಾನಗರ ಪಾಲಿಕೆ ಆವರಣವೂ ಮದ್ಯಪಾನ, ಧೂಮಪಾನ, ನಾಯಿಗಳ ವಾಸ ಸ್ಥಳ, ಮಲಮೂರ್ತ ವಿಸರ್ಜನೆ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ. ಇದು ಮಹಾನಗರ ಪಾಲಿಕೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.
ಗಬ್ಬು ನಾರುತ್ತಿದೆ ಬಳ್ಳಾರಿ ಮಹಾನಗರ ಪಾಲಿಕೆ: ಭಯದಲ್ಲೇ ಬರುವ ಸಾರ್ವಜನಿಕರು! - ಬಳ್ಳಾರಿ ಮಹಾನಗರ ಪಾಲಿಕೆ
ಬಳ್ಳಾರಿ ಮಹಾನಗರ ಪಾಲಿಕೆಯ ಆವರಣದ ಕಾಂಪ್ಲೆಕ್ಸ್ಗಳು ಮದ್ಯಪಾನ, ಧೂಮಪಾನ, ಮಲಮೂತ್ರ ವಿಸರ್ಜನೆ ಮಾಡುವ ಸ್ಥಳಗಳಾಗಿವೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ನಾಗರಿಕ ಹೋರಾಟ ಸಮಿತಿ, ಕಾರ್ಯಕಾರಿ ಸಮಿತಿಯ ಸದಸ್ಯ ಡಾ.ಪ್ರಮೋದ್ ಅವರು, ಸ್ವಚ್ಛತೆಯನ್ನು ಕಾಪಾಡಬೇಕಾದ ಬಳ್ಳಾರಿ ಮಹಾನಗರ ಪಾಲಿಕೆಯ ಆವರಣದ ಕಾಂಪ್ಲೆಕ್ಸ್ಗಳು ಮದ್ಯಪಾನ, ಧೂಮಪಾನ, ಮಲಮೂತ್ರ ವಿಸರ್ಜನೆ ಮಾಡುವ ಸ್ಥಳಗಳಾಗಿವೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಪರಿಸ್ಥಿತಿ ಏನು?. ಇದೆಲ್ಲಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾಣ್ತಾ ಇಲ್ವಾ ಎಂದು ಪ್ರಶ್ನೆ ಮಾಡಿದರು.
ಮಹಾನಗರ ಪಾಲಿಕೆಗೆ ಆಗಮಿಸುವ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬರುವ ಪರಿಸ್ಥಿತಿ ಇದೆ. ಏಕೆಂದರೆ ಪಾಲಿಕೆಯ ಆವರಣ ಮತ್ತು ಕಚೇರಿಗಳಲ್ಲಿ ಬೀದಿ ನಾಯಿಗಳ ಓಡಾಟ ಜೋರಾಗಿ ಇರುತ್ತದೆ. ಅವು ಎಲ್ಲಿ ಕಡಿಯುತ್ತವೆ ಎನ್ನುವ ಭಯ ಇದೆ ಎಂದರು.