ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಜೋರು: ಸಚಿವದ್ವಯರಿಂದ ಹಕ್ಕುಚಲಾವಣೆ

ಇಂದು ಬಳ್ಳಾರಿ ಜಿಲ್ಲೆ ಕಮಲಾಪುರ ಪಟ್ಟಣ ಪಂಚಾಯಿತಿಗೆ ಮತದಾನ ನಡೆಯಿತು. ಮತದಾನ ಪ್ರಕ್ರಿಯೆ ಶುರುವಾಗೋದಕ್ಕೆ ಮುಂಚಿತವಾಗಿ ಆಯಾ ಮತಗಟ್ಟೆ ಕೇಂದ್ರಗಳ ಮುಂದೆ ಮತದಾರರು ಸಾಲುಗಟ್ಟಿ ನಿಂತಿದ್ದು ಕಂಡು ಬಂತು, ಬಿರು ಬಿಸಿಲಿನಲ್ಲೂ ವಯೋವೃದ್ಧರ ಉತ್ಸುಕತೆ ಮೆಚ್ಚುವಂತಿತ್ತು.

ಹಕ್ಕು ಮೆರೆದ ವೃದ್ಧ

By

Published : May 29, 2019, 9:01 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯ ಮತದಾನವು ಇಂದು ಶಾಂತಿಯುತವಾಗಿ ಮುಕ್ತಾಯವಾಗಿದೆ

ಕಮಲಾಪುರ ಪಟ್ಟಣ ಪಂಚಾಯಿತಿಯ ಮತದಾನ

ವಯೋವೃದ್ಧರಿಂದ ಮತದಾನ:

ಇಳಿ ವಯಸ್ಸಿನ ಕೆ.ಪಿ.ಪಾಂಡುರಂಗರಾವ್, ಇಂದು ಪಟ್ಟಣ ಪಂಚಾಯಿತಿ ಎಲೆಕ್ಷನ್​ ನಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದರು.ಇನ್ನೂ ಜಿಲ್ಲೆಯ ಹೂವಿನ ಹಡಗಲಿ ಪುರಸಭೆ ವ್ಯಾಪ್ತಿಯ ಮತಗಟ್ಟೆಯಲ್ಲಿ ಸಚಿವ ಪಿ. ಟಿ. ಪರಮೇಶ್ವರ ನಾಯ್ಕ ಹಾಗೂ ಧರ್ಮ ಪತ್ನಿ ತಮ್ಮ ಹಕ್ಕನ್ನು ಚಲಾಯಿಸಿದರು. ಜೊತೆಗೆ ಸಂಡೂರು ಪುರಸಭೆ ವ್ಯಾಪ್ತಿಯ ಮತಗಟ್ಟೆಯಲ್ಲಿ ಸಚಿವ ಈ ತುಕಾರಾಂ ಹಾಗೂ ಕುಟುಂಬ ಸದಸ್ಯರು, ಹಾಲಿ ಸದಸ್ಯೆ ಆಶಾಲತಾ ಸೋಮಪ್ಪ ಸೇರಿದಂತೆ ಇತರರು ತಮ್ಮ ಹಕ್ಕನ್ನು ಚಲಾಯಿಸಿದರು.

ಮತದಾನ ಎಲ್ಲೆಲ್ಲಿ ಎಷ್ಟೆಷ್ಟು?:

ಮಧ್ಯಾಹ್ನ ಒಂದು ಗಂಟೆಯವರೆಗೆ ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಶೇ. 52.87, ಸಂಡೂರು ಪುರಸಭೆ ಶೇ. 38.38, ಹೂವಿನ ಹಡಗಲಿ ಪುರಸಭೆ ಶೇ. 41.46, ಹರಪನಹಳ್ಳಿ ಪುರಸಭೆ ಶೇ. 45.54 ಸೇರಿದಂತೆ ‌ಒಟ್ಟು 44.08 ರಷ್ಟು ಮತದಾನ ನಡೆದಿದೆ.

For All Latest Updates

TAGGED:

ABOUT THE AUTHOR

...view details