ಕರ್ನಾಟಕ

karnataka

ETV Bharat / state

ಗಣಿ ನಾಡಿನ ಬಸ್​​​ ನಿಲ್ದಾಣದಲ್ಲೀಗ ಅಭಿವೃದ್ಧಿ ಕಾರ್ಯದ ಕಾಯಕಲ್ಪ!

ಬಸ್ ನಿಲ್ದಾಣದಲ್ಲಿ ಕೈಗೆತ್ತಿಕೊಂಡ ಅಭಿವೃದ್ಧಿ ಕಾರ್ಯವು ಆಮೆಗತಿಯಲ್ಲಿ ಸಾಗುತ್ತಿದೆ. ವಿಶಾಲವಾದ ಪ್ಲಾಟ್ ಫಾರಂ ನಿರ್ಮಾಣ ಕಾರ್ಯವು ನಡೆದಿದೆ. ಅದು ಕೂಡ ನಿಧಾನಗತಿಯಲ್ಲಿ ಸಾಗಿದೆ.‌ ನಗರದ ಕೇಂದ್ರ ಬಸ್ ನಿಲ್ದಾಣವನ್ನು ಒಮ್ಮೆ ಕಣ್ಣು ಹಾಯಿಸಿ ನೋಡಿದರೆ ಸಾಕು ಎಲ್ಲ ಅವ್ಯವಸ್ಥೆಯ ದರ್ಶನವಾಗುತ್ತದೆ.

ಬಸ್ ನಿಲ್ದಾಣ

By

Published : Mar 11, 2019, 9:57 PM IST

ಬಳ್ಳಾರಿ: ಸಮಸ್ಯೆಗಳ ಆಗರದ ಮಧ್ಯೆಯೂ ಅಂದಾಜು ಎಂಟು ಕೋಟಿ ರೂ.ಗಳ ವೆಚ್ಚದಲ್ಲಿ ಗಣಿ ನಾಡು ಬಳ್ಳಾರಿ ನಗರದ ಬಸ್ ನಿಲ್ದಾಣದ ಅಭಿವೃದ್ಧಿ ಕಾಯಕಲ್ಪ ಶುರುವಾಗಿದೆ.

ಹೌದು, ಈ ಬಸ್ ನಿಲ್ದಾಣವು ಇಡೀ ರಾಜ್ಯದಲ್ಲೇ ಅತ್ಯಂತ ವಿಶಾಲವಾದ ಎರಡನೇ ಬಸ್ ನಿಲ್ದಾಣವಾಗಿ ಹೊರಹೊಮ್ಮಿದೆ.ಸುಸಜ್ಜಿತ ಹಾಗೂ ವಿಶಾಲ ಪ್ರದೇಶ ವ್ಯಾಪ್ತಿಯ ಈ ಬಸ್ ನಿಲ್ದಾಣದಲ್ಲೀಗ ಅತ್ಯಾಧುನಿಕ ಶೌಚಾಲಯ, ಬಸ್ ಡಿಪೋ ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಪಿಸುವ ಸಲುವಾಗಿಯೇ ಬಸ್ ನಿಲ್ದಾಣದ ಅಭಿವೃದ್ಧಿ ಕಾರ್ಯದ ಕಾಯಕಲ್ಪ‌ ಜೋರಾಗಿಯೇ ಸಾಗಿದೆ.

ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಬಳ್ಳಾರಿ ಕೆಎಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಗಣಿ ನಾಡು ಎಂದು ಕರೆಸಿಕೊಳ್ಳುವ ಬಳ್ಳಾರಿ ಜಿಲ್ಲೆಯ ಕೇಂದ್ರ ಸ್ಥಾನದ ಬಸ್ ನಿಲ್ದಾಣ ಹೈಟೆಕ್ ಆಗಿರುತ್ತದೆ ಎಂದು ಸಾಕಷ್ಟು ಜನ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ, ಇಲ್ಲಿನ ಬಸ್ ನಿಲ್ದಾಣ ಕಂಡರೆ ಸಾಕು ಮಾರುದ್ದ ತೆರಳುವಂತಾಗಿದೆ.

ಗಣಿನಾಡಿನ ಬಸ್ ನಿಲ್ದಾಣ

2006ರಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ವಿಶಾಲವಾದ ಸ್ಥಳದಲ್ಲಿ ನಿರ್ಮಾಣಗೊಂಡ ನಿಲ್ದಾಣದಲ್ಲಿ ಸುಸಜ್ಜಿತವಾದ ಪ್ಲಾಟ್ ಫಾರಂ, ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳ ಸೇರಿದಂತೆ ವಿವಿಧ ಸೌಲಭ್ಯವನ್ನ ಕಲ್ಪಿಸಲಾಗಿದೆ. ಪ್ರತಿ ದಿನವೂ ಸುಮಾರು 800ಕ್ಕೂ ಅಧಿಕ ಬಸ್‌ಗಳು ಈ ನಿಲ್ದಾಣದ ಮುಖೇನ ಸಂಚರಿಸುತ್ತವೆ.

ಬೆಂಗಳೂರು, ಆಂಧ್ರ ಸೇರಿ ವಿವಿಧ ಜಿಲ್ಲೆ, ರಾಜ್ಯಗಳಿಗೆ ತೆರಳುವ ಪ್ರಯಾಣಿಕರು, ವಿದೇಶಿಗರು ಈ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ. ಆದರೆ ಜಿಲ್ಲಾ ಕೇಂದ್ರದ ನಿಲ್ದಾಣವೇ ಮೂಲ ಸೌಲಭ್ಯ, ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ನಿಲ್ದಾಣದಲ್ಲಿ ಖಾಸಗಿ ವಾಹನಗಳ ಅಬ್ಬರ: ‌ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ಸ್ಥಳ ಗುರುತಿಸಿದರೂ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ, ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ನಿಲ್ದಾಣದೊಳಗೆ ಖಾಸಗಿ ವಾಹನಗಳ ಪ್ರವೇಶ ಇಲ್ಲದಿದ್ದರೂ ರಾಜರೋಷವಾಗಿ ವಾಹನಗಳ ಸಂಚಾರ ನಡೆಯುತ್ತಿದೆ. ಆದರೆ ನಿಲ್ದಾಣಧಿಕಾರಿಗಳು ಇದನ್ನು ಕಂಡರೂ ಕಾಣದಂತೆ ಜಾಣ ಮೌನ ವಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳದ ಅಬ್ಬರ ಹೆಚ್ಚಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಬಳಕೆಗಿಲ್ಲ ಕುಡಿವ ನೀರಿನ ಘಟಕ:

ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸರ್ಕಾರದಿಂದ ನಿರ್ಮಿಸಿದ ಶುದ್ಧ ಕುಡಿವ ನೀರಿನ ಘಟಕ ಮೂಲೆಗುಂಪಾಗಿದೆ. ಕಳೆದ ಕೆಲ ದಿನಗಳಿಂದ ಕುಡಿವ ನೀರಿನ ಘಟಕಕ್ಕೆ ಬೀಗ ಜಡಿಯಲಾಗಿದ್ದು, ನಿಲ್ದಾಣದಲ್ಲಿ ಪ್ರಯಾಣಿಕರು ಕುಡಿವ ನೀರಿಗಾಗಿ ಪರದಾಡುವಂತಾಗಿದೆ.ಹೀಗಾಗಿ ಅನಿವಾರ್ಯವಾಗಿ ನಿಲ್ದಾಣದಲ್ಲಿನ ಮಳಿಗೆಗಳಲ್ಲಿ ಹೆಚ್ಚಿನ ಹಣ ನೀಡಿ ಕುಡಿವ ನೀರಿನ ಬಾಟಲ್‌ಗಳನ್ನು ಖರೀದಿಸುವ ಪರಿಸ್ಥಿತಿ ಪ್ರಯಾಣಿಕರಿಗೆ ಎದುರಾಗಿದೆ.

ABOUT THE AUTHOR

...view details