ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ 135 ಜನ ಶಾಸಕರಿದ್ದರೂ ಆಡಳಿತ ನಡೆಸೋದಕ್ಕೆ ಬಿಜೆಪಿ ಶಾಸಕರೇ ಬೆಕಾಗಿದ್ದಾರೆ: ಶಾಸಕ ಯತ್ನಾಳ್

ಕಾಂಗ್ರೆಸ್​ನಲ್ಲಿ 135 ಶಾಸಕರಿದ್ದರು ಆಡಳಿತ ನಡೆಸಲು ಬಿಜೆಪಿ ಶಾಸಕರೇ ಬೇಕಾಗಿದ್ದಾರೆ ಎಂದು ಆಪರೇಷನ್​ ಹಸ್ತ ವಿಚಾರವಾಗಿ ವಾಗ್ದಾಳಿ ನಡೆಸಿದರು.

ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್

By ETV Bharat Karnataka Team

Published : Sep 8, 2023, 9:35 PM IST

ಬಳ್ಳಾರಿ:ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ನವರಿಗೆ ಧಮ್ ಇಲ್ಲ. ಕಾಂಗ್ರೆಸ್​ಗೆ ಬಿಜೆಪಿ ಪಕ್ಷದವರೇ ಬೇಕಾ ಎಂದು ಕಾಂಗ್ರೆಸ್ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ.​

ಬಳ್ಳಾರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಕ್ಕೊಬ್ಬ ಬಿಜೆಪಿಯ ಮಾಜಿ, ಹಾಲಿ ಶಾಸಕರನ್ನು ಕರೆದು ಡಿಸಿಎಂ ಡಿಕೆಶಿ ಮಾತನಾಡುತ್ತಾರೆ. 135 ಜನ ಶಾಸಕರಿದ್ದರೂ ಆಡಳಿತ ನಡೆಸುವುದಕ್ಕೆ ನಿಮಗೆ ನಮ್ಮದೇ ಪಕ್ಷದವರು ಬೇಕು ಅಂದ್ರೇ ಏನು ಮಾಡಲಾಗುತ್ತದೆ. ಒಂದೆಡೆ ಐದು ಲಕ್ಷ ರೂ. ಸಿಗುತ್ತದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಸಚಿವ ಶಿವಾನಂದ ಪಾಟೀಲ್ ಹೇಳ್ತಾರೆ. ನಾನು ಅವರಿಗೆ ಐದು ಕೋಟಿ ರೂ. ಕೊಡ್ತೇನಿ ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳತ್ತಾರಾ? ಈ ರೀತಿಯ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಹರಿಹಾಯ್ದರು.

135 ಸೀಟು ಗೆದ್ದ ಮೇಲೆ ಕಾಂಗ್ರೆಸ್​ನವರಿಗೆ ದುರಂಹಕಾರ ಬಂದಿದೆ. ಸೂರ್ಯ ಚಂದ್ರರಿರೋವರೆಗೂ ಅಧಿಕಾರ ನಡೆಸುತ್ತೇವೆ ಎನ್ನುವ ಲೆಕ್ಕಕ್ಕೇ ಹೋಗಿದ್ದಾರೆ. ಇಂತ ಸಚಿವರನ್ನು ಇಟ್ಟುಕೊಂಡು ಅಧಿಕಾರ ನಡೆಸೋದಕ್ಕೆ ಆಗಲ್ಲವೆಂದು ಬಿಜೆಪಿಯವರನ್ನು ತಮ್ಮ ಪಕ್ಷಕ್ಕೆ ಕರೆಯುತ್ತಿದ್ದಾರೆ. ಈ ಸರ್ಕಾರ ಡಿಸೆಂಬರ್ ವರೆಗೂ ಉಳಿಯೋದಿಲ್ಲ ಇನ್ನೂ ಐದು ವರ್ಷ ಆಡಳಿತ ನಡೆಸೋದು ದೂರದ ಮಾತು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹಗುರವಾಗಿ ಮಾತನಾಡುತ್ತಾರೆ. ಹಾಗಾಗಿ ಪಕ್ಷ ಉಳಿಯೋದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಬೇಸಿಕ್ ಇಲ್ಲ ಅಸ್ಥಿತ್ವನೇ ಇಲ್ಲ. ಇನ್ನೇನು ಸರ್ಕಾರ ಉಳಿಯುತ್ತದೆ ಎಂದು ವಾಗ್ದಳಿ ನಡೆಸಿದರು.

ರಾಯಚೂರಿನಲ್ಲಿ ಆಪರೇಷನ್ ಹಸ್ತ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಷನ್​ ಹಸ್ತೆ ನಡೆಯುತ್ತಿದೆ. ಬಿಜೆಪಿಯ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್​ಗೆ ಸೇರಲಿದ್ದಾರೆ. ಪಕ್ಷ ತೊರೆದು ಹೋಗುವ ಎಲ್ಲರೂ ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಎಂದೇ ಹೇಳ್ತಾರೆ. ಆದರೇ, ಅವರ ಭವಿಷ್ಯವೇ ಮುಗಿದಿರುತ್ತದೆ ಎಂದು ಶಾಸಕ ಯತ್ನಾಳ್​ ಹೇಳಿದ್ದಾರೆ. ಪಕ್ಷ ತೊರೆಯುವವರಿಗೆ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ವಿಶ್ವಾಸವಿರಲ್ಲ ಹಾಗಾಗಿ ಹೋಗಿರ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಮತ್ತೊಮ್ಮ ಮೋದಿ ಅವರನ್ನು ಗೆಲ್ಲಿಸಬೇಕು ಎಂಬ ಆಸೆಯಿದೆ. ಸದ್ಯಕ್ಕೆ ಭದ್ರತೆ, ಆರ್ಥಿಕತೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ನಮ್ಮ ದೇಶ ಈಗ ಜಗತ್ತಿನ ಮೂರನೇ ಶಕ್ತಿಯಾಗಿ ಬೆಳೆದಿದೆ. ಕೇಂದ್ರದಲ್ಲಿ ಭ್ರಷ್ಟಾಚಾರ ಶೂನ್ಯ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ:ಬಿಜೆಪಿಯಲ್ಲಿ ಭವಿಷ್ಯವಿಲ್ಲವೆಂದು ಪಕ್ಷ ಬಿಟ್ಟು ಹೋಗುವವರ ಭವಿಷ್ಯವೇ ಮುಗಿದಿರುತ್ತದೆ: ಯತ್ನಾಳ್

ABOUT THE AUTHOR

...view details