ಕರ್ನಾಟಕ

karnataka

ETV Bharat / state

ಕರ್ನಾಟಕ ಬಂದ್​: ಬಳ್ಳಾರಿಯಲ್ಲಿ ಎತ್ತಿನಬಂಡಿ ಜಾಥಾ ಮೂಲಕ ರೈತರ ಬೆಂಬಲ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ಬಳ್ಳಾರಿಯಲ್ಲಿ ಎತ್ತಿನ ಗಾಡಿ ಜಾಥಾ ನಡೆಸಲಾಯಿತು.

Ballary farmers support to karnataka bundh
ಬಳ್ಳಾರಿಯಲ್ಲಿ ಎತ್ತಿನಬಂಡಿ ಜಾಥಾ

By

Published : Sep 28, 2020, 12:41 PM IST

ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಭೂಸುಧಾರಣೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಜಿಲ್ಲೆಯಲ್ಲಿ ಎತ್ತಿನಬಂಡಿ‌ ಜಾಥಾ ನಡೆಸುವ ಮೂಲಕ ರೈತರು ಬೆಂಬಲ ಸೂಚಿಸಿದರು.

ಎತ್ತಿನಬಂಡಿ ಜಾಥಾ

ಹಿರಿಯ ರೈತ ಮುಖಂಡ ಪ್ರೊ. ನಂಜುಂಡಸ್ವಾಮಿ‌ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಚಾಗನೂರು-ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿಯಿಂದ ಗೋಡೆಹಾಳ್ ಕ್ರಾಸ್ ನಿಂದ ಬಳ್ಳಾರಿವರೆಗೆ ಎತ್ತಿನ ಬಂಡಿ ಜಾಥಾ ನಡೆಸಲಾಯಿತು.

ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ಗೋಡೆಹಾಳ್ ಗ್ರಾಮದಿಂದ ಜಾಗೃತಿ ಜಾಥಾ ಶುರುವಾಯಿತು. ಬಳ್ಳಾರಿ ತಾಲೂಕಿನ ಚಾಗನೂರು, ಬೂದಿಹಾಳ್, ಗೋಡೆಹಾಳ್, ಅಸುಂಡಿ ಗ್ರಾಮದ ರೈತರು ಎತ್ತಿನ ಬಂಡಿಗಳ ಮೂಲಕ‌ ಈ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.

ABOUT THE AUTHOR

...view details