ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರ ಸ್ವಾಮಿಗೆ ಬೆಳ್ಳಿ ಹೆಲಿಕಾಪ್ಟರ್ ಅನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೋಷದಿಂದ ಮುಕ್ತರಾಗಿದ್ದಾರೆ.
ಕಳೆದ 2017ನೇ ಇಸವಿಯಲ್ಲಿ ಹೆಲಿಕಾಪ್ಟರ್ ಮೂಲಕ ಮೈಲಾರ ಲಿಂಗೇಶ್ವರನ ಕಾರಣಿಕೋತ್ಸವಕ್ಕೆ ಡಿಕೆಶಿ ಆಗಮಿಸಿದ್ದರು. ಮೈಲಾರನ ಮೂರನೇ ಕಣ್ಣಿನ ಶಾಪ ಬಿದ್ದಿದೆ ಎಂಬ ಜೋತಿಷಿಗಳ ಸಲಹೆ ಮೇರೆಗೆ, ಇಂದು ಮೈಲಾರ ಲಿಂಗೇಶ್ವರನ ಸನ್ನಿಧಿಗೆ ಬಂದಿಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ನೆರವೇರಿಸಿ ಬೆಳ್ಳಿಯಿಂದ ತಯಾರಿಸಲ್ಪಟ್ಟ ಒಂದು ಕೆಜಿ ತೂಕದ ಹೆಲಿಕಾಪ್ಟರ್ ಆಕರದ ಮೂರ್ತಿಯನ್ನ ಈ ದೇಗುಲಕ್ಕೆ ಕಾಣಿಕೆ ಅರ್ಪಿಸಿದ್ದಾರೆ.
ಅಪಾರ ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರೊಂದಿಗೆ ಬಂದಿಳಿದ ಡಿಕೆಶಿ, ದೇಗುಲದ ಗುರುಗಳ ಸಲಹೆ ಮೇರೆಗೆ ದೇಗುಲದ ಆವರಣದಲ್ಲಿ ಐದು ಬಾರಿ ನಮಸ್ಕಾರ ಹಾಕಿದರು. ದೀಡ ನಮಸ್ಕಾರದ ನಂತರ ರುದ್ರಸ್ನಾನ ವಿಧಿ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದರು.