ಹೊಸಪೇಟೆ/ಬಳ್ಳಾರಿ:ತಾಲೂಕಿನ ಅಯ್ಯನಹಳ್ಳಿ ಗ್ರಾಮದ ಹೊರವಲಯದಲ್ಲಿನ ಜಮೀನೊಂದರಲ್ಲಿ ಸಿಂದೋಗಿ ಸೋಮಣ್ಣ ಮತ್ತು ನಕ್ರಾಳ ಮರಿಬಸಪ್ಪ ಎಂಬುವರಿಗೆ ಸೇರಿದ 26 ಕುರಿಗಳ ಮೇಲೆ ಕಾಡುಪ್ರಾಣಿ ದಾಳಿ ಮಾಡಿ ಸಾಯಿಸಿರುವ ಘಟನೆ ನಡೆದಿದೆ.
ಎಂದಿನಂತೆ ಹಟ್ಟಿಯೊಳಗೆ ಮಲಗಿದ್ದ ಕುರಿಮರಿಗಳ ಮೇಲೆ ಕಾಡು ಪ್ರಾಣಿ ದಾಳಿ ನಡೆಸಿದೆ. ಈ ಹಿನ್ನೆಲೆ 26 ಕುರಿ ಮರಿಗಳು ಸಾವನ್ನಪ್ಪಿದ್ದು, 14 ಕುರಿಗಳ ಸ್ಥಿತಿ ಗಂಭೀರವಾಗಿದೆ.
ಘಟನಾ ಸ್ಥಳಕ್ಕೆ ಹೊಸಪೇಟೆ ಪ್ರಭಾರಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಬೆಣ್ಣೆ ಬಸವರಾಜ ಭೇಟಿ ನೀಡಿ, ಸಾವನ್ನಪ್ಪಿರುವ ಕುರಿಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಡಣಾಪುರ ಪಶುವೈದ್ಯ ಗುರುಬಸವರಾಜ, ಪಶುಪರೀಕ್ಷಕ ವೀರೇಶ ಮರಣೋತ್ತರ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಸತ್ತ ಕುರಿಮರಿಗಳ ವರದಿಯನ್ನು ಸರ್ಕಾರಕ್ಕೆ ಕಳಿಸಿದ್ದು, ಪರಿಹಾರವನ್ನು ಸಂಬಂಧಿಸಿದ ಇಲಾಖೆಯಿಂದ ನೀಡಲಾಗುತ್ತದೆ ಎಂದು ಬೆಣ್ಣೆ ಬಸವರಾಜ ತಿಳಿಸಿದ್ದಾರೆ. ಡಣಾಪುರ ಜಿ.ಪಂ ಸದಸ್ಯೆ ರೇಖಾ ಪ್ರಕಾಶ್, ಕುರಿ ಮಾಲೀಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ವಿತರಿಸಿದರು.