ಹೊಸಪೇಟೆ (ವಿಜಯನಗರ):ಜಿಲ್ಲೆಯ ಎಎಸ್ಐ ವಿರೂಪಾಕ್ಷಪ್ಪ (58) ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
ವಿಜಯನಗರ: ಕೊರೊನಾಗೆ ಎಎಸ್ಐ ವಿರೂಪಾಕ್ಷಪ್ಪ ಬಲಿ - ಕೊರೊನಾಗೆ ಪೊಲೀಸ್ ಬಲಿ
ಮಹಾಮಾರಿ ಕೋವಿಡ್ಗೆ ಕೊರೊನಾ ವಾರಿಯರ್ಸ್ಗಳು ಕೊನೆಯುಸಿರೆಳೆಯುತ್ತಿದ್ದಾರೆ. ಎಎಸ್ಐ ವಿರೂಪಾಕ್ಷಪ್ಪ ಅವರಿಗೂ ಸೋಂಕು ತಗುಲಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಎಎಸ್ಐ ವಿರೂಪಾಕ್ಷಪ್ಪ ನಿಧನ
ವಿರೂಪಾಕ್ಷಪ್ಪ ಅವರಿಗೆ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಬಳಿಕ ಜಿಂದಾಲ್ನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾರೆ. ಇವರು ಮೂಲತಃ ಸಂಡೂರು ತಾಲೂಕಿನ ಚೋರನೂರು ಗ್ರಾಮದವರು. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ:ಕೆಪಿಸಿಸಿ ಮಾಧ್ಯಮ ವಿಭಾಗಕ್ಕೆ ಸಂಯೋಜಕರ ನೇಮಕ