ಕರ್ನಾಟಕ

karnataka

ETV Bharat / state

ಬಳ್ಳಾರಿ: ಚರ್ಚೆ ನಡೆಸದೆ ಸದಾಶಿವ ಆಯೋಗದ ವರದಿ ಶಿಫಾರಸು ಮಾಡಬಾರದೆಂದು ಮನವಿ

ಸಾರ್ವಜನಿಕ ಚರ್ಚೆ ನಡೆಸದೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಶಿಫಾರಸು ಮಾಡಬಾರದೆಂದು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರ ಆಪ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕೊರಚ, ಕೊರಮ, ಕೊರವ ಸಮುದಾಯ
ಕೊರಚ, ಕೊರಮ, ಕೊರವ ಸಮುದಾಯ

By

Published : Sep 19, 2020, 5:15 PM IST

ಬಳ್ಳಾರಿ: ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ಸಾರ್ವಜನಿಕ ಚರ್ಚೆ ಇಲ್ಲದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದೆಂದು ಎಂದು ಕೊರಚ, ಕೊರಮ, ಕೊರವ ಸಮುದಾಯಗಳ ಒಕ್ಕೂಟದಿಂದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರ ಆಪ್ತರಿಗೆ ಮನವಿ ಪತ್ರ ಸಲ್ಲಿಸಿದರು.

ಮಹಾನಗರ ಪಾಲಿಕೆಯ ಆವರಣದಲ್ಲಿ ವೀರ ಶೇಖರರೆಡ್ಡ ಅವರಿಗೆ ಮನವಿ ಸಲ್ಲಿಸಿದ ಅವರು, ಸಮುದಾಯಗಳ ಪರವಾಗಿ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ತರಬೇಕು. ಕೊರಮ, ಕೊರಚ, ಲಂಬಾಣಿ, ಭೋವಿ, ಮತ್ತು ಇನ್ನಿತರೆ ಅಲೆಮಾರಿ ಸಮುದಾಯಗಳ ಹಿತ ಕಾಪಾಡಬೇಕೆಂದು ಮನವಿ ಮಾಡಿದರು.

ಈ ಸಮಯದಲ್ಲಿ ರಾಜ್ಯ ಉಪಾಧ್ಯಕ್ಷ ರಮಣಪ್ಪ ಭಜಂತ್ರಿ, ಜಿಲ್ಲಾಧ್ಯಕ್ಷ ಶ ಸಂತೋಷ್, ಬಳ್ಳಾರಿ ನಗರ ಅಧ್ಯಕ್ಷ ಹೆಚ್.ಕೆ.ಹೆಚ್.ಹನುಮಂತಪ್ಪ, ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ ಕೆ.ವಿ ಶಂಕರಪ್ಪ, ಜಿಲ್ಲಾ ಖಜಾಂಚಿ ಶ್ರೀ ಕೆ ರಂಗಸ್ವಾಮಿ, ಕೆ. ಮಲ್ಲೇಶ್,ಜಿ.ಅರ್.ಕೆ. ಗಾದಿಲಿಂಗಪ್ಪ, ಶ್ರೀರಾಮುಲು, ವೆಂಕಟೇಶ್ ಬಾಬು, ವೇಣು,ಬೋಗರಾಜ್,ಕೆ. ಶಿವರುದ್ರ, ವೆಂಕಟೇಶ್, ಕೆ. ಈರಣ್ಣ, ಕೆ. ರಾಮಂಜನಿ, ರಾಜು ಮತ್ತು ಇನ್ನಿತರೆ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು.

ABOUT THE AUTHOR

...view details