ಬಳ್ಳಾರಿ : ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಸ.ಚಿ ರಮೇಶ್ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರನ್ನ ಭೇಟಿ ಮಾಡಿ ಕನ್ನಡ ವಿಶ್ವವಿದ್ಯಾಲಯದ ಕುಡಿಯುವ ನೀರು, ಮೂಲಭೂತ ಸೌಕರ್ಯ, ಹಾಸ್ಟೇಲ್ ವ್ಯವಸ್ಥೆಗೆ ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.
ಮೂಲಭೂತ ಸೌಕರ್ಯ ಕೊರತೆ: ಸಿಎಂಗೆ ಮನವಿ ಪತ್ರ ಸಲ್ಲಿಸಿದ ಹಂಪಿ ವಿವಿ ಕುಲಪತಿ - kannada news
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂಲಭೂತ ಸೌಲಭ್ಯ, ಕಟ್ಟಡಗಳ ಅನುದಾನದ ಬಗ್ಗೆ ಸಿಎಂಗೆ ಮನವಿ ಪತ್ರ ಸಲ್ಲಿಸಿದ ಕುಲಪತಿ ಸ.ಚಿ. ರಮೇಶ್
ಎಂ ಗೆ ಮನವಿ ಪತ್ರ ಸಲ್ಲಿಸಿದ ಹಂಪಿ ಕನ್ನಡ ವಿ.ವಿ ಕುಲಪತಿಗಳು
ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಕುಲಪತಿ ಸ.ಚಿ ರಮೇಶ್ ಅವರಿಗೆ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ನಂತರ ಅನುದಾನ ನೀಡುವುದಾಗಿ ಭರಸೆ ನೀಡಿದ್ದಾರೆ ಎಂದು ಕುಲಪತಿ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಉನ್ನತ ಶಿಕ್ಷಣ ಇಲಾಖೆ ಸಚಿವ ಜಿ.ಟಿ ದೇವೆಗೌಡ ಅವರನ್ನು ಸಹ ಭೇಟಿ ಮಾಡಿದ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯ ಸಮಸ್ಯೆಗಳು, ಕಟ್ಟಡ ಕಾಮಗಾರಿ, ಅನುದಾನದ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.