ಹೊಸಪೇಟೆ: ಸಚಿವ ಆನಂದ್ ಸಿಂಗ್ ಸರ್ಕಾರಿ ಕಾರು ತೊರೆದು ಖಾಸಗಿ ವಾಹನ ಬಳಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಎಸ್ಕಾರ್ಟ್ ಇಲ್ಲದೇ ಅವರು ಓಡಾಡುತ್ತಿದ್ದಾರೆ. ಈ ಮುಖೇನ ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಅವರು ಮುನಿಸು ಮುಂದುವರೆಸಿದ್ದಾರೆ.
ಎಸ್ಕಾರ್ಟ್ ಇಲ್ಲದೇ ಸಚಿವರ ಓಡಾಟ: ಕುತೂಹಲ ಕೆರಳಿಸಿದ ಆನಂದ್ ಸಿಂಗ್ ನಡೆ - ಸಚಿವ ಆನಂದ ಸಿಂಗ್ ಇತ್ತೀಚಿನ ಸುದ್ದಿ
ಕಳೆದ ಎರಡು ದಿನಗಳಿಂದ ಎಸ್ಕಾರ್ಟ್ ಇಲ್ಲದೇ ಸಚಿವ ಆನಂದ ಸಿಂಗ್ ಓಡಾಡುತ್ತಿದ್ದು, ಅವರ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಎಸ್ಕಾರ್ಟ್ ಇಲ್ಲದೇ ಸಚಿವ ಆನಂದ್ ಸಿಂಗ್ ಓಡಾಟ
ಇಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಲಿದ್ದಾರೆ. ಈ ವೇಳೆ ಆನಂದ್ ಸಿಂಗ್ ಭಾಗಿಯಾಗದೆ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ತೆರಳಿದರು. ಯಲ್ಲಾಪುರದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ರಥ ನಿರ್ಮಾಣ ಕಾರ್ಯ ವೀಕ್ಷಣೆಗೆಂದು ತೆರಳಿದ್ದಾರೆ ಎಂಬ ಮಾಹಿತಿ ದೊರೆತಿದೆ.