ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕು ತಡೆಗಾಗಿ ಕರುನಾಡಿನಲಿ ಯಾಕಿಲ್ಲ ತಂಬಾಕು ನಿಷೇಧ..? - ಕರ್ನಾಟಕ ಸರ್ಕಾರ

ಕೇಂದ್ರ ಆರೋಗ್ಯ ಸಚಿವಾಲಯ ತಂಬಾಕು ಬಳಕೆಗೆ ನಿಷೇಧ ಹೇರಿದೆ. ಜಗಿಯುವ ತಂಬಾಕಿನಿಂದಲೂ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇರುದರಿಂದ ಹರಿಯಾಣ, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಜಗಿಯುವ ತಂಬಾಕು ಮಾರಾಟವನ್ನ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

ತಂಬಾಕು ನಿಷೇಧ
ತಂಬಾಕು ನಿಷೇಧ

By

Published : Apr 13, 2020, 8:35 AM IST

ಬಳ್ಳಾರಿ: ಕೊರೊನಾ ಸೋಂಕು ತಡೆಗಾಗಿ ದೇಶವ್ಯಾಪಿ‌ ರಾಜ್ಯಗಳು ತಂಬಾಕು ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿವೆಯಾದ್ರೂ ಈವರೆಗೂ ಕರ್ನಾಟಕ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನುವುದೇ ಆಶ್ಚರ್ಯಕರ ವಿಷಯವಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ತಂಬಾಕು ಬಳಕೆಗೆ ನಿಷೇಧ ಹೇರಿದೆ. ಜಗಿಯುವ ತಂಬಾಕಿನಿಂದಲೂ ಈ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹರಿಯಾಣ, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಜಗಿಯುವ ತಂಬಾಕು ಮಾರಾಟವನ್ನ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.

ಆದರೆ, ಕರ್ನಾಟಕ ಸರ್ಕಾರ ಮಾತ್ರ ಈವರೆಗೂ ಕೂಡ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ರಾಜ್ಯದ ನಾನಾ ಜಿಲ್ಲೆಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಡಾಬಾ, ಗೂಡಂಗಡಿ ಹಾಗೂ‌ ಮಹಾನಗರ, ಪಟ್ಟಣ, ಹೋಬಳಿ ಮತ್ತು ಆಯಾ ಗ್ರಾಮಗಳಲ್ಲಿ ಈ ತಂಬಾಕು ಉತ್ಪನ್ನಗಳಾದ ಪಾನ್ ಮಸಾಲ, ಸುಪಾರಿ ತಿನ್ನುವ ಜನರು ಸಾರ್ವಜನಿಕ ಸ್ಥಳಗಲ್ಲಿಯೇ ಉಗುಳುವ ದೃಶ್ಯವಂತೂ ಸಾಮಾನ್ಯವಾಗಿ ಬಿಟ್ಟಿದೆಯಾದ್ರೂ ಈವರೆಗೂ ಕೂಡ ಆರೋಗ್ಯ ಇಲಾಖೆಯಾಗಲೀ ಅಥವಾ ರಾಜ್ಯ ಸರ್ಕಾರವಾಗಲೀ ಜಗಿಯುವ ತಂಬಾಕು ನಿಷೇಧಕ್ಕೆ ಮುಂದಾಗಿಲ್ಲ ಎಂಬ ಮಾತು ಕೂಡ ದಟ್ಟವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.‌

ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಿಆರ್ ಪಿಸಿ ಅಡಿಯಲ್ಲಿ ಕೋವಿಡ್ - 19 ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾತ್ರ ತಂಬಾಕು ಬಳಕೆ ನಿಷೇಧಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲದಿರೋದು ವಿಪರ್ಯಾಸವೇ ಸರಿ.

ABOUT THE AUTHOR

...view details