ಬಳ್ಳಾರಿ:ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿಂದು ರೈತಾಪಿ ಕುಟುಂಬದ ದಂಪತಿ ಒಂದೇ ದಿನ ಸಾವನ್ನಪ್ಪಿದ್ದು, ಸಾವಿನಲ್ಲೂ ಒಂದಾಗಿದ್ದಾರೆ.
ವಿಜಯದಶಮಿ ಸಂಭ್ರಮದಲ್ಲಿದ್ದ ಇಡೀ ಶ್ರೀಧರಗಡ್ಡೆ ಗ್ರಾಮವೇ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಗ್ರಾಮದ ಕೊಟ್ಟೂರುಸ್ವಾಮಿ ಮಠದ ಬಳಿಯ ನಿವಾಸಿ ಕಟ್ಟೆಬಸಪ್ಪ (60) ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ನಂತರ ಪತಿಯ ಸಾವಿನ ದುಃಖ ತಾಳಲಾಗದೇ ಪತ್ನಿ ಈರಮ್ಮ(52) ಕೂಡ ಪ್ರಾಣ ಬಿಟ್ಟಿದ್ದಾರೆ.