ಬಳ್ಳಾರಿ: ಲಾರಿ ಮತ್ತು ಬುಲೆರೋ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭಂವಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಘಟನೆ ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಮಲೆಮ್ಮ ದೇಗುಲದ ತಿರುವಿನಲ್ಲಿ ನಡೆದಿದೆ.
ಲಾರಿ-ಬುಲೆರೋ ಡಿಕ್ಕಿ: ಓರ್ವ ಸಾವು - bellary news
ಲಾರಿ ಮತ್ತು ಬುಲೆರೋ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭಂವಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಘಟನೆ ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಮಲೆಮ್ಮ ದೇಗುಲದ ತಿರುವಿನಲ್ಲಿ ನಡೆದಿದೆ.
ಲಾರಿ ಮತ್ತು ಬುಲೆರೊ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ
ಬುಲೆರೋ ವಾಹನದಲ್ಲಿದ್ದ ಸಂಡೂರಿನ ಬಸವೇಶ್ವರ ಎಂಟರ್ ಪ್ರೈಸಸ್ನ ವ್ಯವಸ್ಥಾಪಕ ರಾಜೇಂದ್ರ ಶರ್ಮಾ (55) ಮೃತಪಟ್ಟಿದ್ದಾರೆ. ವಾಹನ ಚಾಲಕ ಆರ್.ಅಲಿಬಾಷಾ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಲಾರಿ ಚಾಲಕ ಪ್ರಶಾಂತ ತಳವಾರ ಅತಿ ವೇಗದಿಂದ ವಾಹನ ಚಲಾಯಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.