ಕೇವಲ ಮೂರಡಿ ಅಗಲ, ಉದ್ದವಿರುವ ಈ ಶೆಡ್ ಸಾರ್ವಜನಿಕರು ಫಾತಿಮಾಳಿಗಾಗಿಯೇ ನಿರ್ಮಿಸಿಕೊಟ್ಟಿದ್ದಾರೆ. ಶೆಡ್ ನ ಒಂದು ಭಾಗದಲ್ಲಿ ಆಕೆ ಮಲಗುತ್ತಾಳೆ. ಇನ್ನುಳಿದ ಭಾಗದಲ್ಲಿ ಆಕೆ ಸಾಕುತ್ತಿರುವ ಹತ್ತಾರು ಬೆಕ್ಕುಗಳಿರುತ್ತವೆ. ಬೆಳಗ್ಗೆ ಎದ್ದ ಕೂಡಲೇ ಆಕೆ ನೋಡೋದು ನಾವೆಲ್ಲ ಅಪಶಕುನ ಎಂಬ ಬಿರುದು ಕೊಟ್ಟಿರುವ ಬೆಕ್ಕುಗಳ ಮುಖವನ್ನು. ಅವುಗಳೊಂದಿಗೆ ಇದ್ದು, ಆರೈಕೆ ಮಾಡುತ್ತಾಳೆ. ಅಲ್ಲಿಲ್ಲಿ ಕೆಲಸ ಮಾಡಿ, ಅವರಿವರು ಕೊಟ್ಟ ಹಣ ಕೂಡಿಟ್ಟು ಅವುಗಳಿಗೆ ನಿತ್ಯ ಹಾಲು ಹಾಕುತ್ತಾರೆ
ಬೆಕ್ಕುಗಳೊಂದಿಗೆ ಜೀವಿಸುತ್ತಿರುವ ಪಾತಿಮಾ ಬಗ್ಗೆ ಒಂದಿಷ್ಟು ಮಾಹಿತಿ... ಆಕೆ ಏಳು ವರ್ಷಗಳ ಹಿಂದೆ ತನ್ನ ಪತಿ ಕಳೆದುಕೊಂಡು ಒಬ್ಬಂಟಿಯಾಗಿದ್ದಾಗ, ಜೊತೆಯಾಗಿದ್ದು ಈ ಬೆಕ್ಕುಗಳಂತೆ. ಅವರಿಗೆ ಒಬ್ಬ ಮಗಳಿದ್ದರು. ಅವಳೂ ಮದುವೆಯಾಗಿ ಹೋದ ಮೇಲೆ ಆಕೆಗೆ ಸಂಗಾತಿಯಾಗಿದ್ದೇ ಈ ಬೆಕ್ಕುಗಳು ಅನ್ನುತ್ತಾರೆ ಸ್ಥಳೀಯರೊಬ್ಬರು..
ನಗರದ ಟಿಪ್ಪು ಸುಲ್ತಾನ ಮಸೀದಿ ರಸ್ತೆಯಲ್ಲಿ ಹೆಚ್ಚಾಗಿ ವಾಹನ ಸಂಚರಿಸುವುದರಿಂದ ಬೆಕ್ಕುಗಳು ಚಕ್ರದಡಿ ಸಿಲುಕಿ ಸಾಯುತ್ತವೆ ಎಂಬ ದೃಷ್ಟಿಯಿಂದ ಬೆಕ್ಕುಗಳ ಕೊರಳಿಗೆ ಹಗ್ಗ ಹಾಕಿ ಕಟ್ಟಿದ್ದಾರಂತೆ. ಜೊತೆಗೆ ಬೆಕ್ಕುಗಳೇ ನನ್ನ ಸರ್ವಸ್ವ ಅಂತಾ ಅವುಗಳೊಂದಿಗೆ ಜೀವಿಸುತ್ತಿದ್ದಾರೆ. ಯಾರೊಬ್ಬರಿಗೂ ಅವು ಕಿರಿ ಕಿರಿ ಮಾಡಲ್ಲ. ಅವರು ಅಷ್ಟು ಜೋಪಾನವಾಗಿ ಅವುಗಳನ್ನ ನೋಡಿಕೊಳ್ಳುತ್ತಿದ್ದಾರೆ ಅಂತಾರೆ ಸೈಯದ್ ಹುಸೇನ್
ಬೆಕ್ಕು, ಕಾಗೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳಲ್ಲಿ ಯಾವುದೇ ದೋಷವಿರಲ್ಲ. ಅವುಗಳನ್ನು ನೋಡಿದರೆ ಅಪಶಕುನವೂ ಅಲ್ಲ. ಎಲ್ಲಿಯವರೆಗೆ ಮೌಢ್ಯಾಚರಣೆ ಮತ್ತು ಕಂದಾಚಾರದಂತಹ ಅನಿಷ್ಠ ಪದ್ದತಿ ಇರುತ್ತದೆಯೋ ಆವರೆಗೆ ಇಂತಹ ಮೂಢನಂಬಿಕೆಗಳಿರುತ್ತವೆ. ಅದನ್ನು ಹೋಗಲಾಡಿಸಲು ಫಾತಿಮಾರಂಥವರು ಮುಂದಾಗಿರೋದು ಹೆಮ್ಮೆಯ ವಿಷಯ..