ಬಳ್ಳಾರಿ:ಗಣಿನಾಡಿನಲ್ಲಿ ಇಂದು ಹೊಸದಾಗಿ 48 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 773ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು ದೃಢಪಟ್ಟಿರುವ 48 ಪ್ರಕರಣಗಳಲ್ಲಿ 17 ಮಂದಿ ಜಿಂದಾಲ್ ಕಾರ್ಖಾನೆಯ ಸೋಂಕಿತರ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿರುವವರು ಎಂದು ಗುರುತಿಸಲಾಗಿದೆ.