ಕರ್ನಾಟಕ

karnataka

ETV Bharat / state

ಗಣಿನಾಡಲ್ಲಿ 314 ಹೊಸ ಕೊರೊನಾ ಕೇಸ್ ದಾಖಲು...ಇಬ್ಬರು ಬಲಿ - Bellary Corona case

ಜಿಲ್ಲೆಯಲ್ಲಿ ಇಂದು ಸಹ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯತ್ತ ಸಾಗಿದೆ. 314 ಹೊಸ ಪ್ರಕರಣ ದಾಖಲಾಗಿ, ಇಬ್ಬರು ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಕುಲ್ ಮಾಹಿತಿ ನೀಡಿದ್ದಾರೆ.

Bellary corona news
ಬಳ್ಳಾರಿ ಕೊರೊನಾ ಪ್ರಕರಣ

By

Published : Sep 29, 2020, 7:12 PM IST

ಬಳ್ಳಾರಿ: ಗಣಿ ಜಿಲ್ಲೆಯಲ್ಲಿಂದು ಹೊಸದಾಗಿ 314 ಕೊರೊನಾ ಪಾಸಿಟಿವ್ ಕೇಸ್​​ಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 31,421ಕ್ಕೆ ಏರಿಕೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟಾರೆ 28,345 ಮಂದಿ ಕೋವಿಡ್​​​​​​ನಿಂದ ಗುಣಮುಖರಾಗಿದ್ದಾರೆ.

ಈ ನಡುವೆ ಇಬ್ಬರು ಕೋವಿಡ್​​ನಿಂದ ಮೃತಪಟ್ಟು ಸಾವಿಗೀಡಾದವರ ಸಂಖ್ಯೆ 460ಕ್ಕೆ ತಲುಪಿದೆ. ಅಲ್ಲದೆ ಜಿಲ್ಲೆಯಲ್ಲಿ 2,616 ಸಕ್ರಿಯ ಪ್ರಕರಣಗಳಿವೆ. ಇಂದು ಸುಮಾರು 295 ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್ ಕೇರ್ ಸೆಂಟರ್ ಹಾಗೂ ಹೋಂ ಐಸೋಲೇಷನ್​ನಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details