ಕರ್ನಾಟಕ

karnataka

ETV Bharat / state

ತುಂಗಭದ್ರಾ ಜಲಾಶಯದ 20 ಕ್ರಸ್ಟ್ ಗೇಟ್​ ಓಪನ್: ಅಪಾರ ಪ್ರಮಾಣದ ನೀರು ಬಿಡುಗಡೆ

ಉತ್ತರ ಕರ್ನಾಟಕ ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಜೀವಕಳೆ ಬಂದಿದೆ. ಬಳ್ಳಾರಿಯ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದ್ದು, ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.

20 crashgate opened in Tungabhadra reservoir
ತುಂಗಭದ್ರಾ ಜಲಾಶಯದ 20 ಕ್ರಸ್ಟ್ ಗೇಟ್​ ಓಪನ್​...ಅಪಾರ ಪ್ರಮಾಣದ ನೀರು ಹೊರಕ್ಕೆ

By

Published : Aug 18, 2020, 5:28 PM IST

ಬಳ್ಳಾರಿ: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ 54,474 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಒಳಹರಿವಿನ ಪ್ರಮಾಣ ಆಧರಿಸಿ ನದಿಗೆ ನೀರು ಹರಿಸಲು ಜಲಾಶಯ ಮಂಡಳಿ ನಿರ್ಧರಿಸಿದೆ. ಜಲಾಶಯದ 20 ಕ್ರಸ್ಟ್ ಗೇಟ್ ಮೂಲಕ 54,474 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ತುಂಗಭದ್ರಾ ಡ್ಯಾಂನ 20 ಕ್ರಸ್ಟ್ ಗೇಟ್​ ಓಪನ್

ಮೊದಲ 10 ಕ್ರಸ್ಟ್ ಗೇಟ್​​​​​ಗಳಲ್ಲಿ 2 ಅಡಿಯಷ್ಟು ನೀರು ಹಾಗೂ ಉಳಿದ 10 ಕ್ರಸ್ಟ್ ಗೇಟ್​​ಗಳಲ್ಲಿ 1.5 ಅಡಿಯಷ್ಟು ನೀರು ಬಿಡಲಾಗುತ್ತಿದೆ.

ಸದ್ಯ ಜಲಾಶಯದಲ್ಲಿ 1632.48 ಅಡಿ ನೀರಿದ್ದು, 97.970 ಟಿಎಂಸಿ ನೀರು ಸಂಗ್ರಹವಿದೆ. ಇನ್ನು ಮಳೆಯಿಂದಾಗಿ 56 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.

ABOUT THE AUTHOR

...view details