ಬಳ್ಳಾರಿ:ಗಣಿನಾಡು ಬಳ್ಳಾರಿ ಜಿಲ್ಲೆಗೆ ಈಗಾಗಲೇ 10 ಸಾವಿರ ಆಂಟಿಜೆನ್ ಕಿಟ್‌ಗಳನ್ನ ಖರೀದಿಸಲಾಗಿದ್ದು, ಆ ಕಿಟ್‌ಗಳನ್ನ ವಿಮ್ಸ್ ಆಸ್ಪತ್ರೆಯಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆಂಟಿಜೆನ್ ಕಿಟ್ಗಳು ಕೋಮೊರ್ಬಿಡಿಟಿ ಮತ್ತು ಇನ್ನಿತರ ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಕೆಮ್ಮು, ನೆಗಡಿ, ಶೀತ, ತಲೆನೋವಿನಂತಹ ರೋಗದ ಗುಣಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ ತಕ್ಷಣ ಈ ಕಿಟ್‌ಗಳ ಮೂಲಕ ಪರೀಕ್ಷಿಸಲಾಗುತ್ತದೆ. 30 ನಿಮಿಷದೊಳಗೆ ನಮಗೆ ವರದಿ ಲಭ್ಯವಾಗುತ್ತದೆ ಎಂದರು.
ಜಿಂದಾಲ್ ಒಳಗಡೆಯೇ ಪಾಸಿಟಿವ್ ಬಂದರೇ ಸೊಂಕಿತ ವ್ಯಕ್ತಿಗೆ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಯನ್ನು ಜಿಂದಾಲ್‌ನವರೇ ಹಾಗೂ ಅವರ ವೈದ್ಯರೇ ನಿರ್ವಹಿಸಲಿದ್ದಾರೆ. ಈಗಾಗಲೇ 17 ಮಂದಿ ಒಳಗಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ ವರದಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದರು. ಇದಲ್ಲದೇ, ಡೇಟ್ ಅಡಿಟ್‌ನ್ನು ನಾಳೆ ಮಧ್ಯಾಹ್ನ ವಿಡಿಯೋ ಕಾನ್ಪರೆನ್ಸ್ ಮೂಲಕ ಬೆಂಗಳೂರಿನ ನುರಿತ ತಜ್ಞರು ನಡೆಸಲಿದ್ದಾರೆ. ಸಾವು ತಡೆಗಟ್ಟುವಿಕೆ, ಆರೋಗ್ಯ ಸುಧಾರಣೆ ಮತ್ತು ಸುರಕ್ಷತೆ ಹಾಗೂ ಇನ್ನಿತರ ವಿಷಯಗಳು ಚರ್ಚೆಗೆ ಬರಲಿವೆ ಎಂದರು.