ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿರುವ ಕತ್ತಿ ಸಹೋದರರನ್ನು ಬಿ.ಎಸ್. ಯಡಿಯೂರಪ್ಪ ಮನವೊಲಿಸುವ ಯತ್ನ ಮಾಡಿದರು.
ಕತ್ತಿ ಸಹೋದರರ ಜತೆಗೆ ಬಿಎಸ್ವೈ ಉಪಹಾರ... ಶಮನವಾಗುತ್ತಾ ಟಿಕೆಟ್ ಕೈ ತಪ್ಪಿದ ಬೇಸರ? - Yeddyurappa
ಉಮೇಶ ಕತ್ತಿ ಒಡೆತನದ ಯುಕೆ-೨೭ ಹೋಟೆಲ್ಗೆ ಆಗಮಿಸಿದ ಯಡಿಯೂರಪ್ಪ ಕತ್ತಿ ಸಹೋದರರು ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರ ಜತೆಗೆ ಉಪಹಾರ ಸೇವಿಸಿದರು.
ಉಪಹಾರ ಸೇವನೆ
ಉಮೇಶ ಕತ್ತಿ ಒಡೆತನದ ಯುಕೆ-27 ಹೋಟೆಲ್ಗೆ ಆಗಮಿಸಿದ ಯಡಿಯೂರಪ್ಪ ಕತ್ತಿ ಸಹೋದರರು ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರ ಜತೆಗೆ ಉಪಹಾರ ಸೇವಿಸಿದರು. ಮುಂದೆ ಶಾಸಕ ಉಮೇಶ ಕತ್ತಿ ಹಾಗೂ ಪಕ್ಕಕ್ಕೆ ರಮೇಶ ಕತ್ತಿರನ್ನು ಕೂಡಿಸಿಕೊಂಡ ಯಡಿಯೂರಪ್ಪ ಅವರು, ಈಗ ಅನ್ಯಾಯ ಆಗಿರಬಹುದು ಮುಂದೆ ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿದರು.
ಆದರೆ ಇಂದು ಸಂಜೆ ಹುಕ್ಕೇರಿಯಲ್ಲಿ ಕತ್ತಿ ಸಹೋದರರು ಬೆಂಬಲಿತರ ಬೃಹತ್ ಸಭೆ ನಡೆಸಲಿದ್ದು, ಸಹೋದರರ ನಿಗೂಢ ನಡೆ ಕುತೂಹಲ ಮೂಡಿಸಿದೆ.