ಕರ್ನಾಟಕ

karnataka

ETV Bharat / state

ಯಳ್ಳೂರಿನ ಅರಾವಳಿ ಜಲಾಶಯಕ್ಕೆ ಹಾರಿ ಯುವತಿ ಆತ್ಮಹತ್ಯೆ - women suicide news

ಇಂದು ಮಧ್ಯಾಹ್ನ ಯಳ್ಳೂರ ಬಳಿಯ ಅರಾವಳಿ ಜಲಾಶಯಕ್ಕೆ ಸ್ಕೂಟಿ ತೆಗೆದುಕೊಂಡು ಹೋಗಿರುವ ಯುವತಿ, ಮೊಬೈಲ್‍ ಹಾಗೂ ತನ್ನಲ್ಲಿದ್ದ ವಸ್ತುಗಳನ್ನು ಸ್ಕೂಟಿ ಒಳಗಡೆ ಡಿಕ್ಕಿಯಲ್ಲಿ ಇಟ್ಟು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ‌..

ಯುವತಿಯೋರ್ವಳು ಆತ್ಮಹತ್ಯೆ
ಯುವತಿಯೋರ್ವಳು ಆತ್ಮಹತ್ಯೆ

By

Published : Aug 1, 2020, 8:54 PM IST

ಬೆಳಗಾವಿ :ತಾಲೂಕಿನ ಯಳ್ಳೂರಿನ ಅರಾವಳಿ ಜಲಾಶಯದಲ್ಲಿ ಯುವತಿಯೋರ್ವಳು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಇಲ್ಲಿನ ಭಾಗ್ಯ ನಗರದ ಸೋನಾಲಿ ಸುರೇಕರ್ (19) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಇಂದು ಮಧ್ಯಾಹ್ನ ಯಳ್ಳೂರ ಬಳಿಯ ಅರಾವಳಿ ಜಲಾಶಯಕ್ಕೆ ಸ್ಕೂಟಿ ತೆಗೆದುಕೊಂಡು ಹೋಗಿರುವ ಯುವತಿ, ಮೊಬೈಲ್‍ ಹಾಗೂ ತನ್ನಲ್ಲಿದ್ದ ವಸ್ತುಗಳನ್ನು ಸ್ಕೂಟಿ ಒಳಗಡೆ ಡಿಕ್ಕಿಯಲ್ಲಿ ಇಟ್ಟು ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಮೃತದೇಹವನ್ನು ಮೇಲೆತ್ತುತ್ತಿರುವ ಸಿಬ್ಬಂದಿ

ಇನ್ನು, ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿಯ ಶವನ್ನು ಜಲಾಶಯದಿಂದ ಹೊರ ತೆಗೆದಿದ್ದು, ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ABOUT THE AUTHOR

...view details