ಚಿಕ್ಕೋಡಿ:ನಮ್ಮ ಕ್ಷೇತ್ರದ ಜನತೆಗೆ ಮಾತು ಕೊಟ್ಟಂತೆ ನಾನು ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ: ಶ್ರೀಮಂತ ಪಾಟೀಲ - ಶ್ರೀಮಂತ ಪಾಟೀಲ
ಗವಾಡ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.
ಶ್ರೀಮಂತ ಪಾಟೀಲ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಪದ್ಮಾವತಿ ವಿದ್ಯಾವರ್ಧಕ ಶಾಲೆಯ ರಜತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕಾಗವಾಡ ಕ್ಷೇತ್ರವನ್ನ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಹಗಲು ರಾತ್ರಿ ದುಡಿಯಲು ಸಿದ್ಧ ಎಂದರು.
ಅಲ್ಲದೇ ಕರ್ನಾಟಕದಲ್ಲಿಯೇ ಕಾಗವಾಡ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ. ನಾನು ಎಂದೂ ದೇವರ ಮೊರೆ ಹೋದವನಲ್ಲ. ನನ್ನ ಮತಕ್ಷೇತ್ರದ ಜನರೇ ನನಗೆ ದೇವರು. ಅವರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.