ಕರ್ನಾಟಕ

karnataka

ETV Bharat / state

ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು : ಲಕ್ಷ್ಮಣ ಸವದಿ

ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದು, ಅವಘಡದ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ನಾನೀಗ ಒಂದು ಕೇತ್ರದ ಮಂತ್ರಿಯಲ್ಲ, ರಾಜ್ಯಕ್ಕೆ ಮಂತ್ರಿ. ಎಲ್ಲರ ಸಮಸ್ಯೆ ಆಲಿಸಬೇಕು. ಅಧಿಕಾರಿಗಳಿಂದ ವರದಿ ಪಡೆದುಕೊಂಡು ಕೂಡಲೇ ಸಮಸ್ಯೆಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದಯು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

Lakshman savadi,ಲಕ್ಷ್ಮಣ ಸವದಿ

By

Published : Aug 31, 2019, 5:00 PM IST

ಚಿಕ್ಕೋಡಿ :ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಅವಘಡದ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ನಾನೀಗ ಒಂದು ಕೇತ್ರದ ಸಚಿವನಲ್ಲ, ರಾಜ್ಯಕ್ಕೆ ಮಂತ್ರಿ. ಎಲ್ಲರ ಸಮಸ್ಯೆ ಆಲಿಸಬೇಕು. ಅಧಿಕಾರಿಗಳಿಂದ ವರದಿ ಪಡೆದುಕೊಂಡು ಕೂಡಲೇ ಸಮಸ್ಯೆಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದಯು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿರಾಶ್ರಿತರಿಗೆ ಹತ್ತು ಸಾವಿರ ಹಣ ನೂರಕ್ಕೆ ತೊಂಭತ್ತರಷ್ಟು ಜನರಿಗೆ ಕೊಟ್ಟಿದ್ದೇವೆ. ಕೆಲವರಿಗೆ ತಾಂತ್ರಿಕ ತೊಂದರೆಯಿಂದ ಉಳಿದಿದ್ದಾರೆ.

ಸಂಪೂರ್ಣ ಮನೆ ಕಳೆದವರಿಗೆ 5 ಲಕ್ಷ ,ಸ್ವಲ್ಪ ಹಾನಿಯಾದವರಿಗೆ ಒಂದು ಲಕ್ಷ ಹಣ ನಿಗಧಿ ಮಾಡಲಾಗಿದೆ. ಮನೆ ನಿರ್ಮಾಣವಾಗುವವರೆಗ ಬಾಡಿಗೆ ಮನೆಯಲ್ಲಿದ್ದವರಿಗೆ 5 ಸಾವಿರ ಪ್ರತಿ ತಿಂಗಳಿನಂತೆ 10 ತಿಂಗಳು ಸರ್ಕಾರ ನೀಡುತ್ತದೆ. ಸ್ವಂತ ಸ್ಥಳದಲ್ಲಿ ಸೇಡ್ ನಿರ್ಮಾಣ ಮಾಡಿದರೆ 50,000 ನೀಡಲಾಗುತ್ತಿದೆ. ಈಗಾಗಲೇ ಪುನರ್ವಸತಿ ಪರಿಹಾರ ನೀಡಿದ್ದೇವೆ. ಬೆಳೆಹಾನಿ ಸರ್ವೆ ಮುಗಿದ ಬಳಿಕ ಹಣ ಕೊಡುತ್ತೇವೆ ಎಂದು ಹೇಳಿದರು.

ನಾನು ಕ್ಷೇತ್ರಕ್ಕೆ ಮಂತ್ರಿ ಅಲ್ಲ, ರಾಜ್ಯಕ್ಕೆ ಮಂತ್ರಿ. ಈಗ ಎಲ್ಲರ ಸಮಸ್ಯೆಗಳನ್ನು ಆಲಿಸಬೇಕು. ಪ್ರತಿ ಹಳ್ಳಿಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಿದ್ದೇವೆ. ಈಗಾಗಲೇ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಹೇಳಿದ್ದೇವೆ‌. ವರದಿ ಸಂಗ್ರಹಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು‌. ನಿಮ್ಮಗೆ ಆಶ್ಚರ್ಯ ಆಗಬಹುದು ಬಿಎಂಟಿಸಿಯಲ್ಲಿ ಪ್ರತಿ ದಿನ 1 ಕೋಟಿ ರೂಪಾಯಿ ಹಾನಿಯಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕುಲಂಕುಷವಾಗಿ ಚರ್ಚ್ ‌ಮಾಡಿದ್ದೇನೆ. ಈಗ ಹಾನಿ ಕಡಿಮೆ ಮಾಡುವುದು,ಜನರಿಗೆ ಒಳ್ಳೆ ಸೇವೆ ಒದಗಿಸುವುದು, ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು, ಈ ಇಲಾಖೆ ಸದೃಢ ಮಾಡುವುದು, ನಮ್ಮ ಮೊದಲ ಕೆಲಸವಾಗಿದೆ ಎಂದು ಹೇಳಿದರು.

ABOUT THE AUTHOR

...view details