ಬೆಳಗಾವಿ:ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾನಗರ ಪಾಲಿಕೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಬೆಳಗಾವಿ ಡಿಸಿ ಕಚೇರಿಗೂ ತಟ್ಟಿದ ಬರದ ಎಫೆಕ್ಟ್: ಟ್ಯಾಂಕರ್ನಲ್ಲಿ ನೀರು ಪೂರೈಕೆ
ಕುಂದಾ ನಗರಿ ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಲೆದೂರಿದ್ದು, ಡಿಸಿ ಕಚೇರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
DC office
ಭೀಕರ ಬರಗಾಲದಿಂದ ಜನ ಕಂಗೆಟ್ಟಿದ್ದು, ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿವರೆಗೂ ಡಿಸಿ ಕಚೇರಿಯಲ್ಲಿ ಹಾಗೋ ಹೀಗೋ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ ಬಿಸಿಲ ಧಗೆ ಹೆಚ್ಚಾಗಿದ್ದರಿಂದ ಕಚೇರಿ ಆವರಣದಲ್ಲಿರುವ ಗಿಡಗಳು ಒಣಗತೊಡಗಿದ್ದವು.
ಮಹಾನಗರ ಪಾಲಿಕೆಯಿಂದ ನೀರು ಪೂರೈಸಲಾಗುತ್ತಿದ್ದು, ಟ್ಯಾಂಕರ್ ನೀರನ್ನೇ ಗಿಡಗಳಿಗೂ ಬಳಸಲಾಗುತ್ತಿದೆ. ಬೇಸಿಗೆ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೀರಿಗಾಗಿ ಜಿಲ್ಲೆಯ ಜನ ಪರಿತಪಿಸುವಂತಾಗಿದೆ.