ಅಥಣಿ: ತಾಲೂಕಿನಲ್ಲಿ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆದ ತರಕಾರಿ ಜಮೀನಿನಲ್ಲೇ ಕೊಳೆತು ಹೋಗಿದೆ. ಇದರಿಂದ ಅಲ್ಪ-ಸ್ವಲ್ಪ ಉಳಿದಿರುವ ತರಕಾರಿಯ ಬೆಲೆ ದುಬಾರಿಯಾಗಿದೆ.
ನೆರೆಯಿಂದ ಬೆಳೆ ನಾಶ: ಅಥಣಿಯಲ್ಲಿ ತರಕಾರಿ ಬಲು ತುಟ್ಟಿ
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಬೆಳೆ ಹಾನಿಯಾದ ಹಿನ್ನೆಲೆ ಅಥಣಿ ಪಟ್ಟಣದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.
ಅಥಣಿಯಲ್ಲಿ ತರಕಾರಿ ಬಲು ತುಟ್ಟಿ
ಪಟ್ಟಣದಲ್ಲಿ ಕಳೆದ ಒಂದು ವಾರದ ಹಿಂದೆ 20 ರೂಪಾಯಿ ಕೆಜಿಗೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ 70 ರಿಂದ 100 ರೂಪಾಯಿ ಮಾರಾಟವಾಗುತ್ತಿದೆ. ಎಲ್ಲ ತರಕಾರಿ ಬೆಲೆ ದುಬಾರಿಯಾದ ಕಾರಣ ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ಬಗ್ಗೆ ಗ್ರಾಹಕ ಪ್ರಕಾಶ್ ಎಂಬುವರು ಮಾತನಾಡಿ, ಮೊದಲು ಇಂತಿಷ್ಟು ಹಣದಲ್ಲಿ ರೇಷನ್ ಮತ್ತು ತರಕಾರಿ ಖರೀದಿಸುತ್ತಿದ್ದೆವು. ಆದರೆ ಈಗ ಸಾಕಷ್ಟು ಸಮಸ್ಯೆಯಾಗಿದೆ. ಸರ್ಕಾರ ತಕ್ಷಣವೇ ಬಡವರ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು.