ಬೆಳಗಾವಿ:ಪೊಲೀಸರ ಕಣ್ತಪ್ಪಿಸಿ ಬಸ್ನಲ್ಲಿ ಸುವರ್ಣ ಸೌಧಕ್ಕೆ ಬಂದ ವಾಟಾಳ್ ನಾಗರಾಜ್, ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಕಣ್ತಪ್ಪಿಸಿ ಸರ್ಕಾರಿ ಬಸ್ನಲ್ಲಿ ಬಂದು ಸುವರ್ಣ ಸೌಧದ ಎದುರು ವಾಟಾಳ್ ಪ್ರತಿಭಟನೆ - ಬೆಳಗಾವಿ ಸುದ್ದಿ
ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸುವಂತೆ ಆಗ್ರಹಿಸಿ ಸುವರ್ಣ ಸೌಧದ ಎದುರು ವಾಟಾಳ್ ನಾಗಾರಾಜ್ ಪ್ರತಿಭಟನೆ ನಡೆಸಿದ್ದಾರೆ.
ವಾಟಾಳ್ ಪ್ರತಿಭಟನೆ
ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸುವಂತೆ ವಾಟಾಳ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ವಾಟಾಳ್ ನಾಗರಾಜ್, ಸೌಧದ ಮುಂಭಾಗದಲ್ಲಿ ಮಲಗಿ ಅಸಮಾಧಾನ ವ್ಯಕ್ತಪಡಿಸಿದರು.
ಸೌಧದೊಳಗೆ ಕಚೇರಿಗಳಿವೆ, ಸಿಬ್ಬಂದಿ ಕರ್ತವ್ಯಕ್ಕೆ ಹೋಗಬೇಕು ಎದ್ದೇಳಿ ಎಂದು ವಾಟಾಳ್ ಗೆ ಪೊಲೀಸರು ಮನವಿ ಮಾಡಿದರು. ಎಲ್ಲಿವೆ ಕಚೇರಿ? ಸೌಧ ಸತ್ತ ಹೆಣವಾಗಿದೆ ಎಂದು ವಾಟಾಳ್ ಆಕ್ರೋಶ ಹೊರಹಾಕಿದರು. ಪೊಲೀಸರು ಎಬ್ಬಿಸಲು ಬಂದಾಗ ಕೊರೊನಾ ಇದೆ ಮುಟ್ಟಬೇಡಿ ಎಂದ ವಾಟಾಳ್ ಅವರನ್ನು ಪೊಲೀಸರು ಮನವೊಲಿಸಿದರು.