ಚಿಕ್ಕೋಡಿ:ಭಿಕ್ಷುಕನೋರ್ವ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಕಲಿ ಕೂಟ ಹನಮಂತ ಗುಡಿ ಪಕ್ಕದಲ್ಲಿ ಜರುಗಿದೆ.
ಭಿಕ್ಷಾಟನೆ ಮಾಡುವಾಗ ಸಾವಿಗೀಡಾದ ಭಿಕ್ಷುಕ! - ಚಿಕ್ಕೋಡಿಯಲ್ಲಿ ಅಪರಿಚಿತ ಶವ ಪತ್ತೆ
ಭಿಕ್ಷಾಟನೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಈತ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕೋಡಿಯಲ್ಲಿ ಅಪರಿಚಿತ ಶವ ಪತ್ತೆ
ಸುಮಾರು 70 ರಿಂದ 75 ವಯಸ್ಸಿನ ವ್ಯಕ್ತಿ ಇವನಾಗಿದ್ದು, ಭಿಕ್ಷೆ ಮಾಡಿ ದಿನ ನೂಕುತ್ತಿದ್ದ ಎನ್ನಲಾಗಿದೆ. ಈತ ಭಿಕ್ಷಾಟನೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಾವನಪ್ಪಿದ್ದಾನೆಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.