ಬೆಳಗಾವಿ:ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಗೊಂಡಿದ್ದ 9 ಜನ ಶಂಕಿತರ ಪೈಕಿ ಇದೀಗ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ನಡೆದಿದೆ.
ಕ್ವಾರಂಟೈನ್ನಿಂದ ಬಿಡುಗಡೆಯಾಗಿದ್ದ ಇಬ್ಬರಲ್ಲಿ ಸೋಂಕು ದೃಢ... ಸಿಹಿ ಹಂಚಿದ್ದ ರಾಜಕೀಯ ಮುಖಂಡರಿಗೆ ಶಾಕ್!
ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಗೊಂಡಿದ್ದ 9 ಶಂಕಿತರ ಪೈಕಿ ಇಬ್ಬರಲ್ಲಿ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.
ವರದಿ ಬರುವ ಮುನ್ನವೇ ಕ್ವಾರಂಟೈನ್ನಿಂದ ಶಂಕಿತರ ಬಿಡುಗಡೆ
ಮಹಾರಾಷ್ಟ್ರದಿಂದ ಆಗಮಿಸಿದ್ದ 9 ಜನರನ್ನು ಅಗಸಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಆದರೆ ವರದಿ ಬರುವ ಮುನ್ನವೇ 9 ಜನರನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿತ್ತು. ಬಿಡುಗಡೆಗೊಂಡಿದ್ದ 9 ಜನರಿಗೆ ಕಾಂಗ್ರೆಸ್ ಮುಖಂಡರು ಸಿಹಿ ಹಂಚಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರು ಕೂಡ ಮಾವಿನ ಹಣ್ಣು ನೀಡಿದ್ದರು.
9 ಜನರ ಪೈಕಿ ನಿನ್ನೆ 3 ವರ್ಷದ ಬಾಲಕ ಹಾಗೂ 47 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಸಿಹಿ ಹಂಚಿದ್ದ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತಂಕ ಶುರುವಾಗಿದೆ.