ಕರ್ನಾಟಕ

karnataka

ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ: ಘಟನೆಯ ಪಿನ್​ ಟು ಪಿನ್​ ಮಾಹಿತಿ

By

Published : Aug 28, 2020, 1:53 PM IST

ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಕುರಿತು ಇಂದು ನಡೆದ ಘಟನೆಯ ಟೈಮ್ ಲೈನ್ ಇಲ್ಲಿದೆ ನೋಡಿ.

time line of Piranwadi issue, Piranwadi issue news, Piranwadi issue latest news, ಪೀರನವಾಡಿ ವಿವಾದದ ಟೈಂ ಲೈನ್​, ಪೀರನವಾಡಿ ವಿವಾದ, ಪೀರನವಾಡಿ ವಿವಾದ ಸುದ್ದಿ,
ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ

ಬೆಳಗಾವಿ: ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಈ ವಿವಾದ ಕುರಿತು ಇಂದು ನಡೆದ ಘಟನೆ ಸಂಫೂರ್ಣ ಟೈಮ್ ಲೈನ್ ಇಲ್ಲಿದೆ.

  • ಮಧ್ಯರಾತ್ರಿ 2.30ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ
  • ಮಧ್ಯರಾತ್ರಿ 3 ಗಂಟೆಗೆ ಸ್ಥಳೀಯ ಪೊಲೀಸರ ಆಗಮನ
  • ಬೆಳಗ್ಗೆ 5.30ಕ್ಕೆ ಸ್ಥಳೀಯ ಮರಾಠಿ ಯುವಕರ ಆಗಮನ, ಪೊಲೀಸರ ಜೊತೆ ವಾಗ್ವಾದ
  • ಬೆಳಗ್ಗೆ 6.30ಕ್ಕೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಯತ್ನ
  • ಬೆಳಗ್ಗೆ 6.35ಕ್ಕೆ ಶಿವಾಜಿ ಪ್ರತಿಮೆ ವಶಕ್ಕೆ ಪಡೆದ ಪೊಲೀಸರು
  • ಬೆಳಗ್ಗೆ 7 ಗಂಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಶುರು ಮಾಡಿದ ಮರಾಠಿ ಯುವಕರು
  • ಬೆಳಗ್ಗೆ 7.30ಕ್ಕೆ ಶಿವಾಜಿ ಪ್ರತಿಮೆ ಬಳಿ ಜಮಾವಣೆಗೊಂಡ ಮರಾಠಿ ಯುವಕರು
  • ಬೆಳಗ್ಗೆ 8 ಗಂಟೆಗೆ ಕನ್ನಡಪರ ಸಂಘಟನೆಗಳ ಮುಖಂಡರ ಆಗಮನ
  • ಬೆಳಗ್ಗೆ 8.30ಕ್ಕೆ ರಾಯಣ್ಣ ಪ್ರತಿಮೆ ಬಳಿ ಒಂದೆಡೆ ಕನ್ನಡಪರ ಸಂಘಟನೆಗಳು ಮತ್ತೊಂದೆಡೆ ಮರಾಠಿ ಭಾಷಿಕ ಯುವಕರ ಜಮಾವಣೆ
  • ಬೆಳಗ್ಗೆ 8.45ಕ್ಕೆ ಸ್ಥಳದಲ್ಲಿ ಬಿಗುವಿನ ವಾತಾವರಣ, ಸ್ಥಳಕ್ಕೆ ಒಂದು ಸಿಎಆರ್, ಡಿಎಆರ್ ತುಕಡಿ ದೌಡು
  • ಬೆಳಗ್ಗೆ 8.50ಕ್ಕೆ ಸ್ಥಳಕ್ಕೆ ಡಿಸಿಪಿ ಶೀಮಾ ಲಾಟ್ಕರ್ ಭೇಟಿ, ಮರಾಠಿ ಸಂಘಟನೆಗಳ ಮುಖಂಡರಿಗೆ ತರಾಟೆ
  • ಬೆಳಗ್ಗೆ 9 ಗಂಟೆಗೆ ಶಿವಾಜಿ ಪ್ರತಿಮೆ ಬಳಿ ಜಮಾವಣೆಗೊಂಡ 200ಕ್ಕೂ ಹೆಚ್ಚು ಮರಾಠಿ ಭಾಷಿಕ ಯುವಕರು, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಭೇಟಿ
  • ಬೆಳಗ್ಗೆ 9.30ಕ್ಕೆ ಜಮಾವಣೆಗೊಂಡ ಮರಾಠಿ ಭಾಷಿಕರ ಮನವೊಲಿಕೆಗೆ ನಗರ ಪೊಲೀಸ್ ಆಯುಕ್ತರ ಯತ್ನ, ಧರಣಿನಿರತರಿಗೆ ಶೀಮಾ ಲಾಟ್ಕರ್ ಬುದ್ಧಿವಾದ
  • ಬೆಳಗ್ಗೆ 9.58 ಶಿವಾಜಿ ಪ್ರತಿಮೆ ಇರೋ ಪಕ್ಕದ ರಸ್ತೆಯಲ್ಲಿ ಬೃಹತ್ ರಾಯಣ್ಣ ಧ್ವಜ ಹಿಡಿದು ಬೈಕ್ ಮೇಲೆ ತೆರಳುತ್ತಿದ್ದ ಯುವಕರು
  • ಬೆಳಗ್ಗೆ 10 ಗಂಟೆಗೆ ಕೆಲ ಕಿಡಿಗೇಡಿಗಳಿಂದ ಕಲ್ಲು ತೂರಾಟ, ಲಘು ಲಾಠಿ ಪ್ರಹಾರ
  • ಬೆಳಗ್ಗೆ 10.30ಕ್ಕೆ ಕಿಡಿಗೇಡಿಗಳನ್ನು ಚದುರಿಸಿ ಪರಿಸ್ಥಿತಿ ಶಾಂತಗೊಳಿಸಿದ ಪೊಲೀಸರು
  • ಬೆಳಗ್ಗೆ 10.48ಕ್ಕೆ ಲಾಠಿ ಚಾರ್ಜ್ ಸೇರಿದಂತೆ ಘಟನೆ ಕುರಿತು ಹೇಳಿಕೆ
  • ಬೆಳಗ್ಗೆ 11.30ಕ್ಕೆ ಪರಿಸ್ಥಿತಿ ಹತೋಟೆಗೆ ತರಲು ಪೀರನವಾಡಿ ಗ್ರಾಮದಲ್ಲಿ ಪೊಲೀಸರಿಂದ ರೌಂಡ್ಸ್
  • ಮಧ್ಯಾಹ್ನ 12ಕ್ಕೆ ಶಿವಾಜಿ ಮೂರ್ತಿ ಬಳಿ ನಡೆದ ಲಾಠಿ ಚಾರ್ಜ್ ಆಗಿರುವ ಸ್ಥಳದಲ್ಲಿ ಚೆನ್ನಮ್ಮ ಪಡೆಯಿಂದ ಭದ್ರತೆ

ABOUT THE AUTHOR

...view details