ಕರ್ನಾಟಕ

karnataka

By

Published : Jul 16, 2020, 6:07 PM IST

ETV Bharat / state

ಮೂರು ಕೊರೊನಾ ಕೇಸ್ ಪತ್ತೆ: 250ಕ್ಕೂ ಹೆಚ್ಚು ಜನರ ಕೋವಿಡ್​​ ಪರೀಕ್ಷೆ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಮೂವರಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ಆರೋಗ್ಯಾಧಿಕಾರಿಗಳು 250ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರ ಕೋವಿಡ್​ ಟೆಸ್ಟ್
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರ ಕೋವಿಡ್​ ಟೆಸ್ಟ್

ಬೆಳಗಾವಿ:ಗ್ರಾಮದ ಕೇವಲ ಮೂರು ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿರುವುದಕ್ಕೆ, ಆರೋಗ್ಯಾಧಿಕಾರಿಗಳು 250ಕ್ಕೂ ಅಧಿಕ ಜನರ ಕೋವಿಡ್ ಟೆಸ್ಟ್ ಮಾಡಿದ್ದಾರೆ. ಈ ಘಟನೆ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದಲ್ಲಿ ನಡೆದಿದೆ.

ಆರೋಗ್ಯಾಧಿಕಾರಿಗಳು ಗ್ರಾಮಸ್ಥರನ್ನು ಸಾಲುಗಟ್ಟಿ ನಿಲ್ಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್​ ಪರೀಕ್ಷೆ ಮಾಡಿಸುತ್ತಿದ್ದುದು ಕಂಡುಬಂತು. ಗಂಟಲು ದ್ರವ ನೀಡಲು ಪುಟ್ಟ ಮಕ್ಕಳು, ಮಹಿಳೆಯರು ಬಂದಿದ್ದರು. ಇದಕ್ಕೂ ಮುನ್ನ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಲಾಗಿದ್ದು, ಬಳಿಕ 250 ಜನರ ಥ್ರೋಟ್ ಸ್ವ್ಯಾಬ್ ಪಡೆಯಲು‌ ನಿರ್ಧಾರ ಕೈಗೊಳ್ಳಲಾಗಿದೆ.

ABOUT THE AUTHOR

...view details