ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ದೇಗುಲದಲ್ಲೇ ನೇಣಿಗೆ ಶರಣಾದ ಅರ್ಚಕ - ಹುಕ್ಕೇರಿ ಪಟ್ಟಣದ ಲಕ್ಷ್ಮೀ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ ಪೂಜಾರಿ ನೇಣಿಗೆ ಶರಣು

ಸಾಂಸಾರಿಕ ಗಲಾಟೆಯಿಂದ ಕೆಲವು ದಿನಗಳ ಹಿಂದೆ ಈತನ ಹೆಂಡತಿ ಮನೆ ಬಿಟ್ಟು, ತವರು ಸೇರಿದ್ದಳಂತೆ. ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಶೋಕ ಪೂಜೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

the man committed suicide in chikkodi
ನೇಣಿಗೆ ಶರಣಾದ ಅರ್ಚಕ

By

Published : Jul 9, 2021, 4:15 PM IST

ಚಿಕ್ಕೋಡಿ: ಮಾನಸಿಕ ಖಿನ್ನತೆಗೊಳಗಾದ ವ್ಯಕ್ತಿಯೋರ್ವ ದೇವಸ್ಥಾನದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ಪಟ್ಟಣದ ಲಕ್ಷ್ಮೀ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ ನಡೆದಿದೆ.

ಹುಕ್ಕೇರಿ ಪಟ್ಟಣದ ಅಶೋಕ ಪೂಜೇರಿ (36) ನೇಣಿಗೆ ಶರಣಾದ ವ್ಯಕ್ತಿ. ನೇಣು ಹಾಕಿಕೊಂಡಿರುವ ವ್ಯಕ್ತಿ ಇದೇ ದೇವಸ್ಥಾನದಲ್ಲೇ ಅರ್ಚಕನಾಗಿದ್ದ. ಸಾಂಸಾರಿಕ ಗಲಾಟೆಯಿಂದ ಕೆಲವು ದಿನಗಳ ಹಿಂದೆ ಈತನ ಹೆಂಡತಿ ಮನೆ ಬಿಟ್ಟು, ತವರು ಸೇರಿದ್ದಳಂತೆ. ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಶೋಕ ಪೂಜೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತ ಅರ್ಚಕನಿಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದಾರೆ.

ಇದನ್ನೂ ಓದಿ : KRS ಅಣೆಕಟ್ಟೆಯಲ್ಲಿ ಯಾವುದೇ ಬಿರುಕಿಲ್ಲ: ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ

ಸ್ಥಳಕ್ಕೆ ಹುಕ್ಕೇರಿ ಪಿಎಸ್‌ಐ ಸಿದ್ದರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details