ಕರ್ನಾಟಕ

karnataka

ETV Bharat / state

ಇಬ್ಬರು ಆರೋಪಿಗಳ ತೀವ್ರ ವಿಚಾರಣೆ.. ಜೈನ ಮುನಿಯ ಡೈರಿ ಸುಟ್ಟಿದ್ದ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ - ಡೈರಿ ಸುಟ್ಟಿದ್ದ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ

ಜೈನ ಮುನಿ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ವಿಚಾರಣೆ ತೀವ್ರಗೊಂಡಿದೆ.

ಇಬ್ಬರು ಆರೋಪಿಗಳಿಂದ ತೀವ್ರ ವಿಚಾರಣೆ ನಡೆಸಿದ ಚಿಕ್ಕೋಡಿ ಪೊಲೀಸರು
ಇಬ್ಬರು ಆರೋಪಿಗಳಿಂದ ತೀವ್ರ ವಿಚಾರಣೆ ನಡೆಸಿದ ಚಿಕ್ಕೋಡಿ ಪೊಲೀಸರು

By

Published : Jul 13, 2023, 5:32 PM IST

Updated : Jul 13, 2023, 7:50 PM IST

ಇಬ್ಬರು ಆರೋಪಿಗಳ ತೀವ್ರ ವಿಚಾರಣೆ ನಡೆಸಿದ ಚಿಕ್ಕೋಡಿ ಪೊಲೀಸರು

ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣದ ಇಬ್ಬರೂ ಆರೋಪಿಗಳನ್ನು ಪೊಲೀಸರು ಏಳು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಜೈನಮುನಿಯ ಡೈರಿ ಸುಟ್ಟು ಹಾಕಿದ್ದರು. ಸದ್ಯ ಚಿಕ್ಕೋಡಿ ಪೊಲೀಸರು ಡೈರಿಯಲ್ಲಿದ್ದ ವಿಷಯದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಜೈನಮುನಿ ಹತ್ಯೆ ಕೇಸ್‌ನಲ್ಲಿ ಬಂಧಿಸಿದ್ದ ಇಬ್ಬರು ಆರೋಪಿಗಳ ವಿಚಾರಣೆಯೂ ಚುರುಕು ಪಡೆದುಕೊಂಡಿದೆ. ಜೈನ ಮುನಿಯ ಹತ್ಯೆ ಬಳಿಕ ಆಶ್ರಮದಲ್ಲಿ ಕಾಮಕುಮಾರ ನಂದಿ ಮಹಾರಾಜರ ಡೈರಿಯನ್ನು ಸಹ ಅಲ್ಲಿಂದ ಆರೋಪಿಗಳು ಹೊತ್ಯೊಯ್ದಿದ್ದರು. ಅದಾದ ಬಳಿಕ ಜೈನ ಮುನಿಗಳ ದೇಹವನ್ನು ಪೀಸ್ ಪೀಸ್ ಮಾಡಿದ ಸಂದರ್ಭದಲ್ಲಿ ಹಾಕಿಕೊಂಡಿದ್ದ ರಕ್ತಸಿಕ್ತ ಬಟ್ಟೆಗಳ ಜತೆಗೆ ಜೈನ ಮುನಿಯ ಪರ್ಸನಲ್ ಡೈರಿಯನ್ನು ಸಹ ಸುಟ್ಟುಹಾಕಿದ್ರು. ಸದ್ಯ ಚಿಕ್ಕೋಡಿಯ ಡಿವೈಎಸ್‌ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ವಿಚಾರಣೆ ಆರಂಭಗೊಂಡಿದ್ದು, ಆರೋಪಿಗಳಾದ ನಾರಾಯಣ ಮಾಳೆ ಹಾಗೂ ಹಸನ್‌ಸಾಬ್ ದಲಾಯತ್ ಅವರನ್ನು ತೀವ್ರವಾಗಿ ವಿಚಾರಿಸಿ ಜೈನ ಮುನಿಯ ಡೈರಿಯಲ್ಲಿದ್ದ ವಿಷಯದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಈ ಸಂಬಂಧ ಹಲವು ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಸಹ ಚಿಕ್ಕೋಡಿ ಪೊಲೀಸರು ಕಲೆ ಹಾಕಿದ್ದಾರೆ.

ಪಿನ್ ಟು ಪಿನ್ ಮಾಹಿತಿ ಕಲೆ:ಇನ್ನು, ಜೈನ ಮುನಿಯ ಪರ್ಸನಲ್ ಡೈರಿಯನ್ನು ಸುಟ್ಟುಹಾಕಿರುವ ಸ್ಥಳವನ್ನು ಆರೋಪಿಗಳು ಪೊಲೀಸರಿಗೆ ತೋರಿಸಿದ್ದಾರೆ. ಸುಟ್ಟ ಡೈರಿಯ ಬೂದಿಯನ್ನು ಎಫ್‌ಎಸ್‌ಎಲ್‌ಗೆ ರವಾನಿಸಲು ಚಿಕ್ಕೋಡಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲು ಸಿದ್ಧತೆ ನಡೆದಿದೆ. ಡೈರಿಯ ಬೂದಿಯ ಜತೆಗೆ ಜೈನ ಮುನಿ ಬಳಸುತ್ತಿದ್ದ ಎರಡು ಮೊಬೈಲ್ ಫೋನ್‌ಗಳು, ಇಬ್ಬರು ಆರೋಪಿಗಳ ಎರಡು ಮೊಬೈಲ್ ಫೋನ್‌ ಸೇರಿ ನಾಲ್ಕು ಮೊಬೈಲ್ ಫೋನ್‌ಗಳನ್ನು ಸಹ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಿದ್ದಾರೆ. ಈಗಾಗಲೇ ಮೊಬೈಲ್‌ನಲ್ಲಿ ಏನಾದರೂ ಸಾಕ್ಷ್ಯ ಇದೆಯಾ..? ಯಾವಾಗೆಲ್ಲ ಕರೆ ಮಾಡಿದ್ರು ಎಂಬ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಜೈನ ಮುನಿಯೊಂದಿಗೆ ಹಣಕಾಸಿನ ವ್ಯವಹಾರ, ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಕಾಲ್ ರೆಕಾರ್ಡ್, ಫೋಟೋ, ವಿಡಿಯೋ ಪತ್ತೆಗಾಗಿ ಎಲ್ಲರ ಮೊಬೈಲ್ ಫೋನ್‌ಗಳನ್ನು ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಜೈನಮುನಿ ಹತ್ಯೆ ಪ್ರಕರಣದಲ್ಲಿ ಪಕ್ಷಗಳು ರಾಜಕೀಯ ಮಾಡಬಾರದು: ಮುನಿಶ್ರೀ ಅಜಯ ಸಾಗರ ಸಲಹೆ

ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ:ನಿನ್ನೆಯೂ ಸಹ ಇಡೀ ದಿನ ಘಟನೆ ನಡೆದ ಸ್ಥಳ, ಮೃತದೇಹ ರವಾನಿಸಿದ ಮಾರ್ಗ, ಜೈನಮುನಿಯ ದೇಹ ತುಂಡರಿಸಿದ ಸ್ಥಳ, ಕಟಕಬಾವಿಯ ಕೊಳವೆಬಾವಿ ಇದ್ದ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಿರೇಕೋಡಿ ಆಶ್ರಮದಿಂದ ಕಟಕಬಾವಿವರೆಗೂ 35 ಕಿ.ಮೀ ರಸ್ತೆ ಮಾರ್ಗದಲ್ಲಿ ಇರೋ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ, ಹಂತಕರು ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದಾರಾ? ಎಂಬ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ:ಜೈನ ಮುನಿ ಹತ್ಯೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಬೇಕು : ಕೆ ಎಸ್ ಈಶ್ವರಪ್ಪ ಆಗ್ರಹ

Last Updated : Jul 13, 2023, 7:50 PM IST

ABOUT THE AUTHOR

...view details