ಬೆಳಗಾವಿ: ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತಿದ್ದು ,ದಿನನಿತ್ಯ ಹಲವು ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿವೆ. ಇಂದು ಕೂಡ ಹತ್ತು ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಮಾಡುತ್ತಿವೆ.
ಅಧಿವೇಶನದ ಮೂರನೇ ದಿನವಾದ ಇಂದು ಕೂಡ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ...
- ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹ.
- ರಾಜ್ಯ ಮಾದಿಗ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ.
- ಉತ್ತರ ಕರ್ನಾಟಕ ಅಜುಂಮನ್ ಎ ಇಸ್ಲಾಂ ಹುಬ್ಬಳ್ಳಿ ಸಂಘಟನೆಯಿಂದ ಪ್ರತಿಭಟನೆ.
- ಅಖಿಲ ಕರ್ನಾಟಕ ಗೋಂಧಳಿ ಸಮಾಜದಿಂದ ಪ್ರತಿಭಟನೆ.
- ಪೊಲೀಸ್ ಸ್ವೀಪರ್ಸ್ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ.
- ಮೀಸಲಾತಿಗಾಗಿ ಉಪ್ಪಾರ ಸಮಾಜದಿಂದ ಪ್ರತಿಭಟನೆ.
- ಟಾಟಾ ಮಾರ್ಕೊ ಪೋಲೊ ಕಾರ್ಮಿಕ ಸಂಘದಿಂದ ಹೋರಾಟ.
- ನೇಗಿಲಯೋಗಿ ರೈತ ಸಂಘದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ.
- ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪ್ರತ್ಯೇಕ ತಾಲೂಕಿಗೆ ಆಗ್ರಹ.
- ತಾಲೂಕು ಹೋರಾಟ ಸಮಿತಿಯಿಂದ ಧರಣಿ.
- ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಹೋರಾಟ.