ಬೆಳಗಾವಿ: ದೇಶದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಪಕ್ಷ ಎಲ್ಲ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯಸಚಿವ ಸುರೇಶ್ ಅಂಗಡಿ ಹೇಳಿದರು.
ಕಾಂಗ್ರೆಸ್ ಅಂದ್ರೆ ತಾಯಿ ಮಗನ ಪಾರ್ಟಿಯಂತಾಗಿದೆ : ಕೇಂದ್ರ ಸಚಿವ ಸುರೇಶ್ ಅಂಗಡಿ
ಬಿಜೆಪಿ ಪಕ್ಷದ ಕಾರ್ಯಕರ್ತರಿಂದಲೇ ದೇಶದಲ್ಲಿ ಅಭೂತಪೂರ್ವ ಜಯ ಗಳಿಸಲು ಸಾಧ್ಯವಾಗಿದೆ. ಬಿಜೆಪಿಯಲ್ಲಿ ಪಕ್ಷ ಮುಖ್ಯ. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳು ಗಣನೆಗೆ ಬರುವುದಿಲ್ಲ. ಇದೆಲ್ಲವೂ ಕಾಂಗ್ರೆಸ್ನಿಂದ ಬಂದ ಪ್ರಭಾಕರ್ ಕೋರೆಯವರಿಗೆ ಗೊತ್ತಿದೆ ಎಂದು ಕೋರೆಯವರನ್ನು ಕಿಚಾಯಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಬಿಜೆಪಿ ಪಕ್ಷದ ಕಾರ್ಯಕರ್ತರಿಂದಲೇ ದೇಶದಲ್ಲಿ ಅಭೂತಪೂರ್ವ ಜಯ ಗಳಿಸಲು ಸಾಧ್ಯವಾಗಿದೆ. ಬಿಜೆಪಿಯಲ್ಲಿ ಪಕ್ಷ ಮುಖ್ಯ. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳು ಗಣನೆಗೆ ಬರುವುದಿಲ್ಲ. ಇದೆಲ್ಲವೂ ಕಾಂಗ್ರೆಸ್ನಿಂದ ಬಂದ ಪ್ರಭಾಕರ್ ಕೋರೆಯವರಿಗೆ ಗೊತ್ತಿದೆ ಎಂದು ಕೋರೆಯವರನ್ನು ಕಿಚಾಯಿಸಿದರು.
ಕಾಂಗ್ರೆಸ್ ಪಾರ್ಟಿ ಅಂದರೆ ತಾಯಿ ಮಗನ ಪಾರ್ಟಿಯಾಗಿದೆ. ಕರ್ನಾಟಕ ಮತ್ತು ಉತ್ತರಪ್ರದೇಶದಲ್ಲಿ ಅಪ್ಪ-ಮಕ್ಕಳ ಪಕ್ಷಗಳಿವೆ. ಆದರೆ, ಕಾರ್ಯಕರ್ತರ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಪಕ್ಷ ಮಾತ್ರ ಎಂದರು. ಈ ವೇಳೆ ಹಿಂದಿನ ಅಧ್ಯಕ್ಷ ಮೋಹನ ಅಂಗಡಿ ಅವರಿಂದ ನೂತನ ಮಂಡಳ ಅಧ್ಯಕ್ಷ ಧನಂಜಯ್ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ ಕೂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್, ಶಹರ ಘಟಕದ ಅಧ್ಯಕ್ಷ ಶಶಿಕಾಂತ್ ಪಾಟೀಲ ಹಾಜರಿದ್ರು.