ಕರ್ನಾಟಕ

karnataka

ETV Bharat / state

ಚಿಕ್ಕೋಡಿಯಲ್ಲಿ ಬಿಡಾಡಿ ದನಗಳ ಕಾಟ.. ವಾಹನ ಸವಾರರಿಗೆ ಸಂಕಷ್ಟ - ಚಿಕ್ಕೋಡಿಯಲ್ಲಿ ಬಿಡಾಡಿ ದನಗಳ ಕಾಟ

ನಗರದಲ್ಲಿ ಬಿಡಾಡಿ ದನಕರುಗಳ ಸಂಖ್ಯೆ ಹೆಚ್ಚಾಗಿದೆ. ವಾಹನ ಸವಾರರಿಗಂತೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿಕ್ಕೋಡಿಯಲ್ಲಿ ಬಿಡಾಡಿ ದನಗಳ ಕಾಟ
Street cow problem in chikodi

By

Published : Dec 18, 2019, 11:22 PM IST

ಚಿಕ್ಕೋಡಿ :ನಗರದಲ್ಲಿ ಬಿಡಾಡಿ ದನಕರುಗಳ ಸಂಖ್ಯೆ ಹೆಚ್ಚಾಗಿದೆ. ವಾಹನ ಸವಾರರಿಗಂತೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿಕ್ಕೋಡಿಯಲ್ಲಿ ಬಿಡಾಡಿ ದನಗಳ ಕಾಟ..

ನಗರದ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್ ಸೇರಿ ವಿವಿಧ ಕಡೆಗಳಲ್ಲಿ ಈ ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ವಾಹನ ಸವಾರರೂ ಜೀವದ ಮೇಲೆ ಹಂಗೂ ಬಿಟ್ಟು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಜನಸಂದಣಿ ಇರುವ ರಸ್ತೆಗಳಲ್ಲಿಯೇ ಅಡ್ಡಾದಿಡ್ಡಿಯಾಗಿ ಸಂಚರಿಸುವ ಇವುಗಳು ಒಮ್ಮೊಮ್ಮೆ ರಸ್ತೆ ಮಧ್ಯೆಯೇ ಕುಳಿತು ಬಿಡುತ್ತವೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಸವಾರರಿಗೆ ಕಂಟಕ:ರಾತ್ರಿ ಹೊತ್ತು ದನಕರುಗಳು ರಸ್ತೆ ಮಧ್ಯೆಯೇ ಕುಳಿತು ಬಿಡುತ್ತವೆ ಅಥವಾ ಕಾಳಗ ನಡೆಸಲು ಪ್ರಾರಂಭಿಸುತ್ತವೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಇವುಗಳನ್ನು ಓಡಿಸಲು ಜನರು ಹರಸಹಾಸ ಪಟ್ಟರೂ ಯಾವುದೇ ಪ್ರಯೋಜನವಾಗುವುದಿಲ್ಲ.

ಕಣ್ಮುಚ್ಚಿ ಕುಳಿತ ಪುರಸಭೆ:ಬಿಡಾಡಿ ದನಕರುಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ತೊಂದರೆ ಅನುಭವಿಸುತ್ತಿದ್ದರೂ ಪುರಸಭೆ ಮಾತ್ರ ತಮಗೆ ಸಂಬಂಧ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತ್ತಿರುವ ವಿಪರ್ಯಾಸವೇ ಸರಿ.

ABOUT THE AUTHOR

...view details