ಕರ್ನಾಟಕ

karnataka

By

Published : Aug 24, 2020, 7:43 PM IST

ETV Bharat / state

ಬೆಳಗಾವಿಯಿಂದ ಅಯೋಧ್ಯೆಗೆ ರೈಲು‌ ವ್ಯವಸ್ಥೆ: ಸಚಿವ ಸುರೇಶ ಅಂಗಡಿ ಭರವಸೆ

ಕೋಟ್ಯಂತರ ಹಿಂದುಗಳ ಆರಾಧ್ಯದೈವ ಶ್ರೀರಾಮನ ದರ್ಶನಕ್ಕೆ ಹೋಗುವ ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ಭಾಗದ ಜನರಿಗೆ ಅನುಕೂಲವಾಗುವಂತೆ ರೈಲು ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಸುರೇಶ ಅಂಗಡಿ ಭರವಸೆ ನೀಡಿದರು.

belagavi
ವಿನಾಯಕನಿಗೆ ವಿಶೇಷ ಪೂಜೆ

ಬೆಳಗಾವಿ: ನಗರದ ರಾಮದೇವ್ ಗಲ್ಲಿಯ ಶ್ರೀರಾಮ ಮಂದಿರಕ್ಕೆ ಗಣೇಶ ಚತುರ್ಥಿಯ ನಿಮಿತ್ತ ಭೇಟಿ ನೀಡಿದ್ದ ಕೇಂದ್ರ ಸಚಿವ ಸುರೇಶ ಅಂಗಡಿ, ಶ್ರೀ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಶ್ರೀ ರಾಮನ ದರ್ಶನಕ್ಕಾಗಿ ಅನುಕೂಲವಾಗುವಂತೆ ಬೆಳಗಾವಿಯಿಂದ ಅಯೋಧ್ಯೆಗೆ ಒಂದು ರೈಲು ವ್ಯವಸ್ಥೆ ಕಲ್ಪಿಸಲು ಇಲ್ಲಿನ ದೇವಸ್ಥಾನ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರು ಮನವಿ ಮಾಡಿದ್ದಾರೆ ಎಂದರು.

ಆದ್ದರಿಂದ ಕೋಟ್ಯಂತರ ಹಿಂದೂಗಳ ಆರಾಧ್ಯದೈವ ಶ್ರೀರಾಮನ ದರ್ಶನಕ್ಕೆ ಹೋಗುವ ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ಭಾಗದ ಜನರಿಗೆ ಅನುಕೂಲವಾಗುವಂತೆ ರೈಲು ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಬಿಜೆಪಿ ಮಂಡಳಿಯ ಅಧ್ಯಕ್ಷ ಧನಂಜಯ ಜಾಧವ್​, ಮಾಜಿ ಮಹಾಪೌರ ಶಿವಾಜಿ ಸುಂಡಕರ್, ಅಶೋಕ್ ಪೋತದಾರ, ರಾಜಶೇಖರ್ ಹಂಡೆ ಇದ್ದರು.

ABOUT THE AUTHOR

...view details