ಕರ್ನಾಟಕ

karnataka

ETV Bharat / state

ತನ್ನ ಸಹಪಾಠಿಗಳಿಗಾಗಿ 1 ಸಾವಿರ ಮಾಸ್ಕ್ ಸಿದ್ಧಪಡಿಸಿದ ಎಸ್ಎಸ್ಎಲ್​​​ಸಿ ವಿದ್ಯಾರ್ಥಿನಿ..! - ​​​​ ಬೆಳಗಾವಿಯಲ್ಲಿ ಹತ್ತು ಸಾವಿರ ಮಾಸ್ಕ್ ಸಿದ್ಧಪಡಿಸಿದ ಹತ್ತನೇ ತರಗತಿ ವಿದ್ಯಾರ್ಥಿನಿ

ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನಗೆ ಬಹುಮಾನವಾಗಿ ಬಂದಿರುವ ಹಣದಲ್ಲಿಯೇ, ಎಸ್ಎಸ್ಎಲ್​​​ಸಿ ಪರೀಕ್ಷೆ ಬರೆಯುವ ತನ್ನ ಸಹಪಾಠಿ ಬಡ ವಿದ್ಯಾರ್ಥಿಗಳಿಗೆ 1 ಸಾವಿರ ಮಾಸ್ಕ್ ಹಾಗೂ 10 ಸಾವಿರ ಹಣವನ್ನು ಸರ್ಕಾರಕ್ಕೆ ಸಲ್ಲಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

SSLC student who prepares 1 thousand mask
ತನ್ನ ಸಹಪಾಠಿಗಳಿಗಾಗಿ 1 ಸಾವಿರ ಮಾಸ್ಕ್ ಸಿದ್ಧಪಡಿಸಿದ ಎಸ್ಎಸ್ಎಲ್​​​ಸಿ ವಿದ್ಯಾರ್ಥಿನಿ

By

Published : May 26, 2020, 10:01 PM IST

ಬೆಳಗಾವಿ:ನಗರದ ಖಾಸಗಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ತನಗೆ ಬಹುಮಾನವಾಗಿ ಬಂದಿರುವ ಹಣದಲ್ಲಿಯೇ, ಎಸ್ಎಸ್ಎಲ್​​​ಸಿ ಪರೀಕ್ಷೆ ಬರೆಯುವ ತನ್ನ ಸಹಪಾಠಿ ಬಡ ವಿದ್ಯಾರ್ಥಿಗಳಿಗೆ 1 ಸಾವಿರ ಮಾಸ್ಕ್ ಹಾಗೂ 10 ಸಾವಿರ ಹಣವನ್ನು ಸರ್ಕಾರಕ್ಕೆ ಸಲ್ಲಿಸಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

ನಗರದ ವಡಗಾವಿಯ ವಜ್ಜೆ ಗಲ್ಲಿಯ ನಿವಾಸಿ ಶ್ರೇಯಾ ವಿಶ್ವನಾಥ ಸವ್ವಾಶೇರಿ ಎಂಬ ವಿದ್ಯಾರ್ಥಿನಿ 1 ಸಾವಿರ ಮಾಸ್ಕ್ ಹಾಗೂ 10 ಸಾವಿರ ಹಣವನ್ನು ನೀಡಿದ್ದಾಳೆ. ಅಭಿನಯ ಸ್ಪರ್ಧೆಯಲ್ಲಿ ಬಂದಿರುವ 8,000 ಸಾವಿರ ಹಣದಲ್ಲಿ ಮಾಸ್ಕ್ ಗಳನ್ನು ಸ್ವತಃ ತಾನೇ ಸಿದ್ಧಪಡಿಸಿದ್ದಾಳೆ. ಇತರ ವಿದ್ಯಾರ್ಥಿಗಳ ಅನುಕೂಲವಾಗಬೇಕು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಸೋಂಕು ಹರಡಬಾರದೆಂದು ಮುಂಜಾಗ್ರತಾ ಕ್ರಮದ ದೃಷ್ಟಿಯಿಂದ ಮಾಸ್ಕ್ ನೀಡಿದ್ದಾಳೆ.

ತನ್ನ ಸಹಪಾಠಿಗಳಿಗಾಗಿ 1 ಸಾವಿರ ಮಾಸ್ಕ್ ಸಿದ್ಧಪಡಿಸಿದ ಎಸ್ಎಸ್ಎಲ್​​​ಸಿ ವಿದ್ಯಾರ್ಥಿನಿ

ಇದಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ, ಬೆಳಗಾವಿ ಜಿಲ್ಲೆಯಲ್ಲಿ ಅಸಾಧಾರಣ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದ ಈ ವಿದ್ಯಾರ್ಥಿನಿಗೆ 10 ಸಾವಿರ.ರೂಗಳ ಬಹುಮಾನ ಬಂದಿತ್ತು. ವಿದ್ಯಾರ್ಥಿನಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಸಾವಿರ ರೂ. ಚೆಕ್ ಹಾಗೂ ಮಾಸ್ಕ್ ಗಳನ್ನು ಹಸ್ತಾಂತರ ಮಾಡಿದ್ದಾಳೆ.

ವಿದ್ಯಾರ್ಥಿನಿಯ ಈ ಕಾರ್ಯವನ್ನು ಕೇಂದ್ರ ಸಚಿವ ಸುರೇಶ್ ಅಂಗಡಿ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿಯವರು ಮೆಚ್ಚಿಕೊಂಡಿದ್ದು, ಶುಭಹಾರೈಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿಯಾದ ಶ್ರೇಯಾ, ನೃತ್ಯ, ಗಾಯನ, ಭಾಷಣ, ಜಾನಪದ ಗೀತೆಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ, 2,00 ಕ್ಕಿಂತ ಹೆಚ್ಚು ಬಹುಮಾನ ಗೆದ್ದಿದ್ದಾಳೆ. ಇನ್ನು ಗೆದ್ದಂತಹ ಸಂಪೂರ್ಣ ಬಹುಮಾನದ ಹಣವನ್ನು ವಿದ್ಯಾರ್ಥಿಗಳು ಹಾಗೂ ಬಡ ಜನರ ಸೇವೆಗಾಗಿ ಉಪಯೋಗಿಸುತ್ತಿದ್ದಾಳೆ. ಈ ಮೊದಲು ಕೀರ್ತನೆ ಮೂಲಕ ಲೋಕಸಭೆ ಹಾಗೂ ವಿಧಾನ ಸಭೆಯ ಚುನಾವಣೆಯಲ್ಲಿ ತಾನು ಗಳಿಸಿದ ಬಹುಮಾನ ಹಣದಿಂದಲೇ ಸ್ವಂತ ಖರ್ಚಿನಿಂದ ಮತದಾನದ ಕುರಿತು ಜಾಗೃತಿ ಮಾಡಿರುವುದು ವಿಶೇಷ.

ABOUT THE AUTHOR

...view details