ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಪೈಶಾಚಿಕ ಕೃತ್ಯ: ಪಬ್​ ಜಿಗಾಗಿ ತಂದೆಯನ್ನೇ ಪೀಸ್​ ಪೀಸ್​​ ಮಾಡಿದ ಮಗ! - ಮಾರಕಾಸ್ತ್ರ

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವಂತೆ ರಣಭೀಕರ ಪ್ರಕರಣ ನಡೆದಿದೆ. ಪಬ್​ಜಿ ಗೇಮ್ ಆಡಲು ಇಂಟರ್ನೆಟ್​ಗೆ ಹಣ ಕೊಡದ ತಂದೆಯನ್ನು ಮಗ ತುಂಡು ತುಂಡಾಗಿ ಕತ್ತರಿಸಿದ್ದಾನೆ.

ತಂದೆಯನ್ನೇ ಕೊಚ್ಚಿ ಕೊಲೆ

By

Published : Sep 9, 2019, 9:30 AM IST

ಬೆಳಗಾವಿ:ಪಬ್​ ಜಿ ಗೇಮ್ ಆಡಲು ಇಂಟರ್ನೆಟ್​ಗೆ ಹಣ ಕೊಡದ ತಂದೆಯನ್ನೇ ಪಾಪಿ ಮಗ ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ನಡೆದಿದೆ.

ಪಬ್​ಜಿ ಗೇಮ್ ಆಡದಂತೆ ತಂದೆ ಮಗನಿಗೆ ಬುದ್ಧಿ ಹೇಳಿದರೂ‌ ಮಗ ಕೇಳಿಲ್ಲ. ನಿನ್ನೆಯಷ್ಟೇ ಇಂಟರ್ನೆಟ್ ಪ್ಯಾಕ್ ಮುಗಿದ ಕಾರಣ ಮಗ ತಂದೆಯಿಂದ ಹಣ ಕೇಳಿದ್ದ. ಹಣ ನೀಡಲು ನಿರಾಕರಿಸಿದ್ದಕ್ಕೆ ತಂದೆಯನ್ನೇ ಹತ್ಯೆಗೈದಿದ್ದಾ‌ನೆ.

ಶಂಕ್ರಪ್ಪ ಕಮ್ಮಾರ(59) ಹತ್ಯೆಗೀಡಾಗಿರುವ ತಂದೆ. ರಘುವೀರ್ ಕಮ್ಮಾರ(21) ತಂದೆಯನ್ನು ಕತ್ತರಿಸಿ ಕೊಂದಿರುವ ಪಾಪಿ ಮಗ. ಶಂಕ್ರಪ್ಪ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ತಂದೆ ಮಲಗಿದ್ದಾಗ ಮಾರಕಾಸ್ತ್ರಗಳಿಂದ ಕತ್ತು, ಕಾಲು ಕತ್ತರಿಸಿ ಬೇರ್ಪಡಿಸಿ ಕೊಲೆ‌ ಮಾಡಿದ್ದಾನೆ.

ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details