ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮುಸ್ಲಿಂರ ಜೊತೆ ಒಂದೇ ತಟ್ಟೆಯಲ್ಲಿ ಊಟ ಮಾಡಿದ ಯೋಧರು - ಬಕ್ರೀದ್​ ನಮಾಜ್​

ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದ ಪಿಎಂ ತೋಟದ ಮಸೀದಿಯಲ್ಲಿ ನಮಾಜ್​ ಮಾಡಿದ ಸೈನಿಕರು ಬಳಿಕ ಮುಸ್ಲಿಂ ಬಾಂಧವರ ಜೊತೆಯಲ್ಲಿ ಒಂದೇ ತಟ್ಟೆಯಲ್ಲಿ ಊಟ ಮಾಡಿ ಸಹೋದರತೆ ಮೆರೆದರು.

ಬಕ್ರೀದ್​ ಸಂಭ್ರಮಾಚರಿಸಿದ ಯೋಧರು

By

Published : Aug 12, 2019, 8:51 PM IST

ಬೆಳಗಾವಿ:ಇಂದು ದೇಶದಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬ ಆಚರಿಸಿದರು. ಇದೇ ವೇಳೆ ಜಿಲ್ಲೆಯ ಕುಡಚಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರ ಜೊತೆ ಯೋಧರು ನಮಾಜ್​ನಲ್ಲಿ ಪಾಲ್ಗೊಂಡಿದ್ದರು.

ಬಕ್ರೀದ್​ ಸಂಭ್ರಮದಲ್ಲಿ ಯೋಧರು ಭಾಗಿ

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂ ತೋಟದ ಮಸೀದಿಯಲ್ಲಿ ನಮಾಜ್​ ಮಾಡಿದ ಸೈನಿಕರು ಬಳಿಕ ಮುಸ್ಲಿಂ ಬಾಂಧವರ ಜೊತೆಯಲ್ಲಿ ಒಂದೇ ತಟ್ಟೆಯಲ್ಲಿ ಊಟ ಮಾಡಿ ಸಹೋದರತೆ ಮೆರೆದರು.

ಶಿರಗೂರು ಗ್ರಾಮದ ನೀರಿನಲ್ಲಿ ಸಿಲುಕಿದ್ದ ಜನರನ್ನ ರಕ್ಷಿಸಲು ಯೋಧರು ತೆರಳಿದ್ದರು. ಆಗ ಬಕ್ರೀದ್​ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details