ಬೆಳಗಾವಿ:ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಬಿದ್ದು, ಆರು ಜನರು ದುರ್ಮರಣ ಹೊಂದಿರುವ ಘಟನೆ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಬಳಿ ಸಂಭವಿಸಿದೆ.
ಬೆಳಗಾವಿಯಲ್ಲಿ ಸೇತುವೆ ಮೇಲಿಂದ ಉರುಳಿದ ಟ್ರ್ಯಾಕ್ಟರ್: ಆರು ಜನರ ದುರ್ಮರಣ - ಟ್ರಾಕ್ಟರ್ ಅಪಘಾತದಲ್ಲಿ ಆರು ಜನ ಸಾವು
ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಬಿದ್ದು, ಆರು ಜನರು ದುರ್ಮರಣ ಹೊಂದಿರುವ ಘಟನೆ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಬಳಿ ಸಂಭವಿಸಿದೆ.
ಇಟಗಿ- ಬೋಗೂರ ಗ್ರಾಮದ ಮಧ್ಯದ ಸೇತುವೆ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸುವಾಗ ಮತ್ತಿಬ್ಬರು ಮೃತಪಟ್ಟಿದ್ದಾರೆ. ಬೋಗೂರು ಗ್ರಾಮದ ಶೇಖಪ್ಪ ಕೇದಾರಿ(38), ಗುಲಾಬಿ ಹುಣಸಿಕಟ್ಟಿ(35) ಶಾಂತವ್ವ ಅಳಗೋಡಿ(65), ಶಾಂತವ್ವ(63) ಮೃತ ದುರ್ದೈವಿಗಳು. ಮತ್ತಿಬ್ಬರ ಹೆಸರು ತಿಳಿದುಬಂದಿಲ್ಲ. ಮೃತರೆಲ್ಲರೂ ಬೋಗೂರು ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅದರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೋಗೂರ ಗ್ರಾಮದಿಂದ ಇಟಗಿಗೆ ಕಬ್ಬು ಕಟಾವು ಮಾಡಲು ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.