ಬೆಳಗಾವಿ: ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ ನಡೆಯಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಲೋಕ ಸಮರದ ನಂತರ ಮತ್ತೆ ಆಪರೇಷನ್ ಕಮಲ: ಸಚಿವ ಸತೀಶ ಜಾರಕಿಹೊಳಿ ಬಾಂಬ್ - Satish Jarkiholi
ಬಿಜೆಪಿ ಮುಖಂಡರು ಆಪರೇಷನ್ ಕಮಲವನ್ನು ನಿಲ್ಲಿಸಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆ ತಟಸ್ಥರಾಗಿರಬಹುದು ಎಂದು ಸಚಿವ ಸತೀಶ ಜಾರಕಿಹೊಳಿ ಗೊಂದಲದ ಹೇಳಿಕೆಯೊಂದನ್ನು ನೀಡಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ಸಲ ಈ ಹಿಂದೆ ಆಪರೇಷನ್ ಕಮಲ ವಿಫಲವಾಗಿದೆ. ಆದರೆ, ಅವರು ಸರ್ಕಾರ ರಚನೆಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವರ್ಷದಿಂದ ವರ್ಷಕ್ಕೆ ಕ್ಯಾಲೆಂಡರ್ ಬದಲಾಗುತ್ತೆ. ಅದೇ ರೀತಿ ಕಳೆದ ಚುನಾವಣೆಯಲ್ಲಿ ಅವರು ಹೆಬ್ಬಾಳ್ಕರ್ ಪರ ಆಸಕ್ತಿಯಿಂದ ಪ್ರಚಾರ ಮಾಡಿದ್ದರು. ಸದ್ಯೆ ರಮೇಶ ಜಾರಕಿಹೊಳಿ ತಟಸ್ಥರಾಗಿರಬಹುದು ಇಲ್ಲವೇ ಗೋಕಾಕ್ ಕ್ಷೇತ್ರಕ್ಕೆ ಸೀಮಿತವಾಗಿ ಪ್ರಚಾರ ಮಾಡತ್ತಿರಬಹುದು ಎಂದರು.