ಕರ್ನಾಟಕ

karnataka

ETV Bharat / state

ಅಥಣಿ ಟಿಕೆಟ್​ ಹಂಚಿಕೆ: ಕೈ ಕಾರ್ಯಕರ್ತರ ಜೊತೆ ಸತೀಶ್​ ಸಭೆ - ಅಥಣಿ ಟಿಕೆಟ್​ ಹಂಚಿಕೆ ,

ಕಾಂಗ್ರೆಸ್​ ಕಾರ್ಯಕರ್ತರ ಜೊತೆ ಇಂದು ಸತೀಶ್​​ ಜಾರಕಿಹೊಳಿ ಅವರು ಅಥಣಿ ಮತ್ತು ಕಾಗೋಡ ಟಿಕೆಟ್​ ಹಂಚಿಕೆ ಸಂಬಂಧ ಸಭೆ ನಡೆಸಿದರು.

Satish Jarkiholi , ಸತೀಶ್​​ ಜಾರಕಿಹೊಳಿ

By

Published : Nov 15, 2019, 8:47 PM IST

ಅಥಣಿ:ಅಥಣಿ ಮತ್ತು ಕಾಗೋಡ ಟಿಕೆಟ್​ ಹಂಚಿಕೆ ಸಂಬಂಧ ಇಂದು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಾಜಿ ಸಚಿವ, ಶಾಸಕಸತೀಶ್​​ ಜಾರಕಿಹೊಳಿಸಭೆ ನಡೆಸಿದರು.

ಸಭೆಯಲ್ಲಿ ಅಥಣಿ ಸ್ಥಳೀಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಥಳೀಯರಿಗೆ ಬಿಟ್ಟು ನೀವು ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಬೇಡಿ. ಸದಾಶಿವ ಬುಟಾಳೆ ಟಿಕೆಟ್ ನೀಡಿ ಎಂದು ಪಟ್ಟುಹಿಡಿದರು. ಈ ವೇಳೆ ಸತೀಶ್​ರವರು ಇನ್ನೆರಡು ದಿನಗಳಲ್ಲಿ ಅಥಣಿ ಟಿಕೆಟ್ ಘೋಷಣೆಯಾಗಲಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಇದೇ ವೇಳೆ ಮಹೇಶ್​ ಕುಮಟಳ್ಳಿ ಸೋಲಿಸಲು ಕರೆ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸತೀಶ್​ ಸಭೆ

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷ ತೊರೆದು ಕುಮಟಳ್ಳಿ ಹೋಗಿದ್ದಾರೆ. ಮತದಾರರು ಹೋಗಿಲ್ಲ. ಈ ಬಾರಿ ಗೆಲುವು ಸಾಧಿಸುತ್ತೇವೆ. ಲಕ್ಷ್ಮಣ ಸವದಿ ವಿರುದ್ಧ ಸ್ಪರ್ಧಿಸಿ ಮಹೇಶ್​ ಕುಮಟಳ್ಳಿ ಅವರನ್ನು ಗೆಲ್ಲಿಸಿದ್ದೇವು. ಈ ಬಾರಿಯು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಟಿಕೆಟ್ ವಿಷಯವಾಗಿ ಸಿದ್ದರಾಮಯ್ಯ ಅಥಣಿ ಸ್ಥಳೀಯ ಎಲ್ಲಾ 12 ಆಕಾಂಕ್ಷಿಗಳನ್ನು ಪ್ರತ್ಯೇಕವಾಗಿ ಮಾತನಾಡಿಸಿದ್ದಾರೆ. ನಮ್ಮಲ್ಲಿ ಗೊಂದಲವಿಲ್ಲ ಎಂದರು.

ಅಥಣಿ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರು ಬೆಂಬಲ ನೀಡುವುದಿಲ್ಲ ಎನ್ನುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಆ ರೀತಿ ಏನು ಇಲ್ಲ. ಮೂಲ ಹಾಗೂ ಸ್ಥಳೀಯ ಕಾಂಗ್ರೆಸ್ಸಿಗರು ಎಂಬ ಪ್ರಶ್ನೆ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದರು.
ರಮೆಶ್ ಜಾರಕಿಹೋಳಿ ಯಾವ ವಸ್ತು ಕಳೆದುಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಸಮಯ ಬಂದಾಗ ಹೇಳುತ್ತೇವೆ ಎಂದರು.

ಕಾರ್ಯಕ್ರಮಕ್ಕೆ ಶಾಸಕ ಶಹಜಹಾನ್ ಡೊಂಗರ್ ಗಾಂವ್​ ಹಾಗೂ ಪ್ರಮುಖ ನಾಯಕರು ಗೈರಾಗಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಅವರು ಬೇರೆ, ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಸಮಯವಿದೆ ಎಂದು ತಿಳಿಸಿದರು.

ಈ ವೇಳೆ ಕಾರ್ಯಕರ್ತರು ನಿಷ್ಠಾವಂತ, ಎಲ್ಲರಿಗೂ ತಿಳಿದಿರುವಂತ, ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುವಂತಹ ಅಭ್ಯರ್ಥಿಗೆ ಟಿಕೆಟ್​ ನೀಡುವಂತೆ ಮವಿ ಮಾಡಿಕೊಂಡರು.

ABOUT THE AUTHOR

...view details