ಕರ್ನಾಟಕ

karnataka

ETV Bharat / state

ನಾನು ಕೇಳಿದ ಎಲ್ಲರಿಗೂ ಕಾಂಗ್ರೆಸ್ ಟಿಕೆಟ್​ ಸಿಕ್ಕಿಲ್ಲ: ಸತೀಶ ಜಾರಕಿಹೊಳಿ - state eletion 2023

ಕಿತ್ತೂರು, ಸವದತ್ತಿ, ಗೋಕಾಕ್ ಕ್ಷೇತ್ರಗಳ ಟಿಕೆಟ್​ ಗೊಂದಲ ವಿಚಾರವಾಗಿ ಸಂಬಧಿಸಿ ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

satish-jarakiholi-press-meet-in-belagavi-congress-office
ನಾನು ಕೇಳಿದ ಎಲ್ಲರಿಗೂ ಕಾಂಗ್ರೆಸ್ ಟಿಕೆಟ್​ ಸಿಕ್ಕಿಲ್ಲ: ಸತೀಶ ಜಾರಕಿಹೊಳಿ

By

Published : Apr 8, 2023, 7:43 PM IST

Updated : Apr 8, 2023, 10:38 PM IST

ನಾನು ಕೇಳಿದ ಎಲ್ಲರಿಗೂ ಕಾಂಗ್ರೆಸ್ ಟಿಕೆಟ್​ ಸಿಕ್ಕಿಲ್ಲ: ಸತೀಶ ಜಾರಕಿಹೊಳಿ

ಬೆಳಗಾವಿ:ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟವರು ನಮ್ಮ ಜೊತೆಗೆ ಇರುತ್ತಾರೆ. ಇಲ್ಲವಾದಲ್ಲಿ ಅವರ ದಾರಿ ಅವರಿಗೆ ಎಂದು ಕೆಪಿಸಿಸಿ‌ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮಗಳ ಜೊತೆಗೆ‌ ಕಿತ್ತೂರು, ಸವದತ್ತಿ, ಗೋಕಾಕ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.

ಮೂರು ಕ್ಷೇತ್ರಗಳಲ್ಲಿ ಸಂಧಾನದ ಮೂಲಕ ಬಂಡಾಯ ಶಮನಕ್ಕೆ ಪ್ರಯತ್ನಿಸುತ್ತೇವೆ, ಟಿಕೆಟ್​ ನೀಡುವ ವೇಳೆ ಅಭ್ಯರ್ಥಿಗಳು ಪರ, ವಿರೋಧ ಎದುರಿಸಬೇಕು ಎಂದು ಹೇಳಿದ್ದೆವು. ಸಂಧಾನ ಮಾಡುವುದು ಅಭ್ಯರ್ಥಿಗಳ ಜವಾಬ್ದಾರಿಯೂ ಕೂಡ ಆಗಿದೆ. ಪಕ್ಷದಲ್ಲಿ ನಮ್ಮವರು, ಬೇರೆಯವರು ಎಲ್ಲರೂ ಆಕಾಂಕ್ಷಿಗಳು, ಕೆಲವರಿಗೆ ಟಿಕೆಟ್ ಸಿಕ್ಕಿದೆ, ಇನ್ನೂ ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ. ಅಂತಿಮವಾಗಿ ಪಕ್ಷದ ನಿರ್ಧಾರವನ್ನು ಸ್ವಾಗತ ಮಾಡಲೇಬೇಕು ಎಂದು ಹೇಳಿದರು.

ಅಶೋಕ ಪೂಜಾರಿಯವರನ್ನು ಟಿಕೆಟ್ ಕೊಡುತ್ತೇವೆ ಎಂದು ಕರೆದುಕೊಂಡು ಬಂದಿದ್ದೆವು. ಆದರೆ, ಹೈಕಮಾಂಡ್ ಮಹಾಂತೇಶ ಕಡಾಡಿಗೆ ಅವರಿಗೆ ಟಿಕೆಟ್ ನೀಡಿದೆ. ಯಾವ ಆಧಾರದ ಮೇಲೆ ಮಹಾಂತೇಶ ಕಡಾಡಿಗೆ ಟಿಕೆಟ್ ಸಿಕ್ಕಿದೆ ಎಂದು ಗೊತ್ತಿಲ್ಲ. ಕಡಾಡಿಗೆ ದೆಹಲಿಯಲ್ಲಿ ಟಿಕೆಟ್ ಫೈನಲ್ ಆಗಿದೆ. ಇದರ ಬಗ್ಗೆ ನಾನು ಹೈಕಮಾಂಡ್​ಗೆ ಕೇಳುತ್ತೇನೆ. ಆದರೂ ಹೈಕಮಾಂಡ್ ತೀರ್ಮಾನವೇ ಅಂತಿಮ‌ ಎಂದರು.

ಏಪ್ರಿಲ್ 10ಕ್ಕೆ ಬಳಿಕ ಮೂರನೇಯ ಪಟ್ಟಿ ಬಿಡುಗಡೆ:ನಾನು ಹೇಳಿದವರಿಗೆ ಅನೇಕ ಕಡೆ ಟಿಕೆಟ್ ಸಿಕ್ಕಿಲ್ಲ. ಯಾರಿಗೆ ಟಿಕೆಟ್ ಸಿಕ್ಕಿದೆ ಅವರೆಲ್ಲ ನಮ್ಮವರೇ. ಏಪ್ರಿಲ್ 10ರ ಬಳಿಕ ಮೂರನೇಯ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅನೇಕ ಕಡೆಗಳಲ್ಲಿ ಗೊಂದಲ ಇದೆ, ಗೊಂದಲ ಪರಿಹಾರಕ್ಕೆ ಇನ್ನೊಂದು ಸುತ್ತಿನ ಸಭೆಯ ಅವಶ್ಯಕತೆ ಇದೆ ಎಂದು ಸತೀಶ ಜಾರಕಿಹೊಳಿ ಹೇಳಿದರು. ಅಥಣಿ ಕ್ಷೇತ್ರದ ಟಿಕೆಟ್​​ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದಲ್ಲಿ ಮೂರು ಜನ ಆಕಾಂಕ್ಷಿಗಳು ಇದ್ದಾರೆ. ಎಲ್ಲರನ್ನೂ ಒಟ್ಟುಗೂಡಿಸಲು ಟಿಕೆಟ್​ ತಡೆ ಹಿಡಿಯಲಾಗಿದೆ. ಬೇರೆ ಯಾರನ್ನು ಕರೆತರಲು ಕಾಯುತ್ತಿಲ್ಲ ಎಂದ ಸತೀಶ್​ ಜಾರಕಿಹೊಳಿ, ನಮ್ಮ ಪಕ್ಷದಲ್ಲಿ ಸ್ಟಾರ್ ಪ್ರಚಾರಕರ ಅವಶ್ಯಕತೆ ಇಲ್ಲ. ಪಕ್ಷದಲ್ಲಿ ಇರೋ ಪ್ರತಿಯೊಬ್ಬ ಕಾರ್ಯಕರ್ತರೇ ಸ್ಟಾರ್ ಕ್ಯಾಂಪೇನರ್​ಗಳು ಎಂದರು.

ಇದನ್ನೂ ಓದಿ:ಅಮುಲ್ ಉತ್ಪನ್ನ ಮಾರಾಟಕ್ಕೆ ಅನುಮತಿ ನೀಡಿದರೆ ನಂದಿನಿ ಬಾಗಿಲು ಹಾಕುವುದರಲ್ಲಿ ಆಶ್ಚರ್ಯವಿಲ್ಲ: ಹೆಚ್.ಆರ್. ಬಸವರಾಜಪ್ಪ

ಪ್ರಧಾನಿ ಮೋದಿಯಿಂದ ರಾಜ್ಯದಲ್ಲಿ ಆರು ವಿಭಾಗದಲ್ಲಿ ರ್ಯಾಲಿ ವಿಚಾರಕ್ಕೆ ಮಾತನಾಡಿ, ಮೋದಿ ಬರುವುದರಿಂದ ರಾಜ್ಯದಲ್ಲಿ ಏನು ಪ್ರಭಾವ ಬೀಳಲ್ಲ ಎಂದರು. ಟಿಕೆಟ್ ಕೊಡೊವವರೆಗೆ ಮಾತ್ರ ಜಾರಕಿಹೊಳಿ, ಸಿದ್ದು, ಡಿಕೆಶಿ ಬಣ. ಟಿಕೆಟ್ ಕೊಟ್ಟ ಮೇಲೆ ಎಲ್ಲರೂ ಸೇರಿ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್​ನಲ್ಲಿ ನಾಲ್ಕನೇ ಪಟ್ಟಿಯೂ ಸಹ ಬರಲಿದೆ. ಅತೀ ಗೊಂದಲ ಇರುವ 10 ರಿಂದ 15 ಕ್ಷೇತ್ರಗಳಿವೆ. ಹೈವೋಲ್ಟೆಜ್ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯಿಂದ ಯಾವುದೇ ಕ್ಷೇತ್ರವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಮತದಾರರ ಓಲೈಕೆಗಾಗಿ ರಾಜಕೀಯ ಪಕ್ಷಗಳಿಂದ ಭಾರಿ ಕಸರತ್ತು.. ಜಿದ್ದಿಗೆ ಬಿದ್ದು ಆಶ್ವಾಸನೆಗಳ ಘೋಷಣೆ

Last Updated : Apr 8, 2023, 10:38 PM IST

ABOUT THE AUTHOR

...view details