ಬೆಳಗಾವಿ: ಮಹಾನಗರ ಪಾಲಿಕೆ ಮತ್ತು ಇನ್ನಿತರ ಸರ್ಕಾರಿ ಕೆಲಸಗಳಲ್ಲಿರುವ ಸಫಾಯಿ ಕರ್ಮಚಾರಿ ಮತ್ತು ಬಡ ಕಾರ್ಮಿಕರ ಸಂಬಳವನ್ನು, ಆನ್ಲೈನ್ ಮೂಲಕ ಜಮೆ ಮಾಡಬೇಕೆಂದು ಆಗ್ರಹಿಸಿ ಸಪಾಯಿ ಕರ್ಮಚಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಫಾಯಿ ಕರ್ಮಚಾರಿ ಸಂಬಳವನ್ನು ಆನ್ಲೈನ್ ಮೂಲಕ ಜಮೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ... - ಈ-ಪೆಮೆಂಟ್
ಮಹಾನಗರ ಪಾಲಿಕೆ ಮತ್ತು ಇನ್ನಿತರ ಸರ್ಕಾರಿ ಕೆಲಸಗಳಲ್ಲಿರುವ ಸಪಾಯಿ ಕರ್ಮಚಾರಿ ಮತ್ತು ಬಡ ಕಾರ್ಮಿಕರ ಸಂಬಳವನ್ನು, ಆನ್ಲೈನ್ ಮೂಲಕ ಜಮೆ ಮಾಡಬೇಕೆಂದು ಆಗ್ರಹಿಸಿ ಸಪಾಯಿ ಕರ್ಮಚಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸಪಾಯಿ ಕರ್ಮಚಾರಿ ಸಂಬಳವನ್ನು ಆನ್ಲೈನ್ ಮೂಲಕ ಜಮೆ ಮಾಡುವಂತೆ ಆಗ್ರಹ
ಸಪಾಯಿ ಕರ್ಮಚಾರಿ ಸಂಬಳವನ್ನು ಆನ್ಲೈನ್ ಮೂಲಕ ಜಮೆ ಮಾಡುವಂತೆ ಆಗ್ರಹ
ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಸಹ ಗುತ್ತಿಗೆದಾರರಿಗೆ ಸಹಕರಿಸುತ್ತಿದ್ದಾರೆ. ಬ್ಯಾಂಕಿನವರು ನಮ್ಮ ಯಾವುದೇ ಪಾಸ್ ಬುಕ್ ಅಪ್ಡೆಟ್ ಮಾಡಿಕೊಡದೆ ತೊಂದರೆ ಕೊಡುತ್ತಿದ್ದಾರೆ.ಅದರಲ್ಲಿ ಗುತ್ತಿಗೆದಾರ ನಾಗೇಶ ಗೊಲ್ಲರ ಒಬ್ಬನಾಗಿದ್ದಾನೆ, ಇನ್ನು ಮುಂದೆ ಆದರು ನಮ್ಮ ಸಂಬಳವನ್ನು ನೇರವಾಗಿ ಈ-ಪೆಮೆಂಟ್ ಮಖಾಂತರ ಖಾತೆಗೆ ಜಮಾ ಮಾಡಬೇಕು ಮತ್ತು ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ಬಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.