ಬೆಳಗಾವಿ:ಅಪಘಾತದಿಂದ ನಡು ರಸ್ತೆಯಲ್ಲಿ ಬಿದ್ದು ವ್ಯಕ್ತಿಯೊಬ್ಬ ನರಳಾಡಿದ ಘಟನೆ ನಗರದ ಟೀಳಕವಾಡಿಯ ಎರಡನೇ ರೈಲ್ವೆ ಗೇಟ್ ಬಳಿ ನಡೆದಿದೆ. ಉತ್ತರ ಪ್ರದೇಶ ಮೂಲದ ರಾಜು ಎಂಬಾತ ರಸ್ತೆ ಮೇಲೆ ಹೋಗುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ.
ಬೈಕ್ ಡಿಕ್ಕಿ: ಅರ್ಧ ಗಂಟೆ ರಸ್ತೆಯಲ್ಲೇ ನರಳಾಡಿದ ಪಾದಚಾರಿ - road accident
ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮೇಲೆ ಬಿದ್ದ ಪಾದಚಾರಿಯೊಬ್ಬ ಅರ್ಧ ಗಂಟೆಗಳ ಕಾಲ ನರಳಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವ ಪಾದಚಾರಿ
ರಸ್ತೆ ಮೇಲೆ ಬಿದ್ದು ಪಾದಚಾರಿ ಅರ್ಧ ಗಂಟೆ ನರಳಾಡಿದರೂ ಸ್ಥಳದಲ್ಲಿದ್ದವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಲಿಲ್ಲ. ಬಳಿಕ ಪೊಲೀಸರು ವ್ಯಕ್ತಿಯನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಟೀಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.