ಕರ್ನಾಟಕ

karnataka

ETV Bharat / state

ಮುಂದುವರಿದ 'ಮಹಾ'ಮಳೆ: ಭೋರ್ಗರೆಯುತ್ತಿದೆ ಘಟಪ್ರಭೆ ಎಡದಂಡೆ ಕಾಲುವೆ

ಭಾರಿ ಪ್ರಮಾಣದ ಹಿಡಕಲ್ ಜಲಾಶಯದ ನೀರಿನಿಂದ ಘಟಪ್ರಭಾ ಎಡದಂಡೆ ಕಾಲುವೆ ಬೋರ್ಗರೆದು ಹರಿಯುತ್ತಿದೆ. ಇದರ ಮೂಲಕ ನೀರು ಜಮಖಂಡಿಗೆ ಸೇರುತ್ತಿವೆ.

ಘಟಪ್ರಭಾ ಎಡದಂಡೆ ಕಾಲುವೆ ಬೋರ್ಗರೆತ

By

Published : Sep 11, 2019, 8:53 PM IST

ಬೆಳಗಾವಿ: ಹಿಡಕಲ್ ಜಲಾಶಯದಿಂದ ಬಿಡಲಾದ ಭಾರಿ ಪ್ರಮಾಣದ ನೀರಿನಿಂದ ಘಟಪ್ರಭಾ ಎಡದಂಡೆ ಕಾಲುವೆಯಿಂದ ನೀರು ಧುಮುಕ್ಕಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಾಗನೂರು ಗ್ರಾಮದ ಹೊರವಲಯದ ಕಾಲುವೆ ತುಂಬಿ ಹರಿಯುತ್ತಿದೆ.

ಘಟಪ್ರಭಾ ಎಡದಂಡೆ ಕಾಲುವೆ ಭೋರ್ಗರೆತ

ಸೇತುವೆ ಮೇಲೆ‌ ಕಾಲುವೆ ನಿರ್ಮಾಣ ಮಾಡಿದ್ದರಿಂದ ನೀರು ಕಾಲುವೆಯಿಂದ ಕೆಳಗೆ ಬೀಳುತ್ತಿದೆ. ನೀರು ಧುಮ್ಮಿಕ್ಕು ಬೀಳುತ್ತಿರುವ ಕಾರಣ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ.

ಜೋರು ಮಳೆಯಿಂದ ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯ ಕಳೆದ ತಿಂಗಳಲ್ಲೇ ಭರ್ತಿ ಆಗಿತ್ತು. ಈಗ ಮಹಾರಾಷ್ಟ್ರದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ನೀರು ಕಾಲುವೆಗೆ ಸೇರುತ್ತಿರುವುದರಿಂದ ಕಾಲುವೆಗಳೇ ಜಲಪಾತದಂತೆ ಹರಿಯುತ್ತಿವೆ.

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ ಎಡದಂಡೆ ಕಾಲುವೆ ಮೂಲಕ ನೀರು ಜಮಖಂಡಿಗೆ ಬಿಡಲಾಗುತ್ತದೆ.

ABOUT THE AUTHOR

...view details