ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಪಿಐಎಲ್ ಡಿಸ್ಮಿಸ್ ಆಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ರಿಪೋರ್ಟ್ ಸಬ್ಮಿಟ್ ಆಗಿದೆ. ಹೀಗಾಗಿ ಮಾಜಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಪಡೆಯಲು ಯಾವುದೇ ಅಡೆತಡೆಗಳಿಲ್ಲ ಎಂದು ಸಹೋದರ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಮಹಿಳೆ ಪರ ವಕೀಲರು ಹೈಕೋರ್ಟ್ನಿಂದ ಸುಪ್ರೀಂಗೆ ಹೋಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಮತ್ತೆ ಹೈಕೋರ್ಟ್ ನಿರ್ಣಯಕ್ಕೆ ತಿಳಿಸಿದೆ.
ಈಗಾಗಗಲೇ ಕಳೆದ 10ರಂದು ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಮೇನ್ ಪಿಐಎಲ್ ಕೂಡ ಡಿಸ್ಮಿಸ್ ಆಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಬಿ ರಿಪೋರ್ಟ್ ಸಬ್ಮಿಟ್ ಆಗಿದೆ. ಬಿ ರಿಪೋರ್ಟ್ನಲ್ಲಿ ಟ್ಯ್ರಾಪ್ ಅಂತಾ ಇದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರದ್ದು ಸದ್ಯ ಕೋರ್ಟ್ನಲ್ಲಿ ಯಾವುದೇ ಕೇಸ್ಗಳಿಲ್ಲ ಎಂದು ಸ್ಪಷ್ಟಪಡಿಸಿದರು.