ಕರ್ನಾಟಕ

karnataka

By

Published : May 27, 2020, 8:50 AM IST

Updated : May 27, 2020, 9:59 AM IST

ETV Bharat / state

ಸೋಂಕು ದೃಢಪಟ್ಟ ಗ್ರಾಮದಲ್ಲಿ ಸಚಿವ ಜಾರಕಿಹೊಳಿ, ಕುಮಟಳ್ಳಿ ಉಪಹಾರ ಸೇವನೆ: ಕ್ವಾರಂಟೈನ್​ ಆಗ್ತಾರಾ ನಾಯಕರು?

ಇದೇ 25 ರಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಝುಂಜರವಾಡ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಗ್ರಾಮಸ್ಥರು ಉಪಾಹಾರ ನೀಡಿದ್ದರು. ಆದರೆ ಇದೇ ಗ್ರಾಮದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ಸಚಿವರು ಹಾಗೂ ಶಾಸಕರು ಸ್ವತಃ ಕ್ವಾರಂಟೈನ್ ಆಗುತ್ತಾರಾ ಎಂಬ ಪ್ರಶ್ನೆಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Ramesh Jarakihulli, Kummatalli tour in the Infected village
ರಮೇಶ್ ಜಾರಕಿಹೊಳಿ, ಕುಮಟಳ್ಳಿ ಪ್ರವಾಸ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಿನ್ನೆ ಒಂದೇ ದಿನ 12 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ತಾಲೂಕಿನ ಝುಂಜರವಾಡದಲ್ಲಿ ಒಂದು, ನಂದಗಾಂವ್​​ನಲ್ಲಿ ಮೂರು, ಹಾಗೂ ಸವದಿಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಸೋಂಕು ದೃಢಪಟ್ಟಿರುವ ವ್ಯಕ್ತಿಗಳು ಊರಿನ ತುಂಬೆಲ್ಲ ಓಡಾಡಿದ್ದರು. ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು ಎನ್ನಲಾಗ್ತಿದೆ.

ರಮೇಶ್ ಜಾರಕಿಹೊಳಿ, ಕುಮಟಳ್ಳಿ ಪ್ರವಾಸ

ಇನ್ನು, ಮೇ 25 ರಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಝುಂಜರವಾಡ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬ್ಯಾರೇಜ್ ಕಾಮಗಾರಿ ವೀಕ್ಷಣೆ ಮಾಡಿದ್ದರು.

ಇವರಿಗೆ ಝುಂಜರವಾಡ ಗ್ರಾಮಸ್ಥರು ಸಾಥ್ ನೀಡಿದ್ದರು. ಗ್ರಾಮಸ್ಥರೊಂದಿಗೆ ಉಪಹಾರ ಸೇವಿಸಿದ್ದರು. ಆದರೆ ಇದೇ ಗ್ರಾಮದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಮುಂಜಾಗ್ರತಾ ಕ್ರಮವಾಗಿ ಸಚಿವರು, ಹಾಗೂ ಶಾಸಕರು ಸ್ವತಃ ಕ್ವಾರಂಟೈನ್ ಆಗುತ್ತಾರಾ ಎಂಬ ಪ್ರಶ್ನೆಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಇವರ ಜೊತೆ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಕೂಡಾ ಸಾಥ್ ನೀಡಿದ್ದರು.

Last Updated : May 27, 2020, 9:59 AM IST

ABOUT THE AUTHOR

...view details