ಚಿಕ್ಕೋಡಿ :ರಾಜ್ಯ ಸರ್ಕಾರ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಹರಡಿತ್ತಿರುವ ಕಾರಣ ಸಾರ್ವಜನಿಕ ಗಣೇಶ ಉತ್ಸವಕ್ಕೆ ನಿರ್ಬಂಧನೆ ಹಾಕಿದೆ. ಆದರೆ, ಹಾಕಿರುವ ನಿರ್ಬಂಧ ಹಿಂದೆ ಪಡೆಯಬೇಕು ಎಂದು ನಿಪ್ಪಾಣಿಯ ಶ್ರೀರಾಮ ಸೇನಾ ಹಿಂದೂಸ್ಥಾನ ಸಂಘಟನೆ ವತಿಯಿಂದ ತಹಶೀಲ್ದಾರ್ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕರ ಗಣೇಶ ಉತ್ಸವ ನಿಷೇಧವನ್ನು ಸರ್ಕಾರ ಹಿಂಪಡೆಯಲು ಮನವಿ - ಸಾರ್ವಜನಿಕರ ಗಣೇಶ ಉತ್ಸವ ನಿಷೇಧವನ್ನು ಸರ್ಕಾರ ಹಿಂಪಡೆಯಲು ಮನವಿ
ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ನಿಪ್ಪಾಣಿಯ ಶ್ರೀರಾಮ ಸೇನಾ ಹಿಂದೂಸ್ಥಾನ ಸಂಘಟನೆ ತಹಶೀಲ್ದಾರ್ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು..
ಸಾರ್ವಜನಿಕರ ಗಣೇಶ ಉತ್ಸವ ನಿಷೇಧವನ್ನು ಸರ್ಕಾರ ಹಿಂಪಡೆಯಲು ಮನವಿ
ಮಹಾರಾಷ್ಟ್ರದ ಗಡಿಯ ನಿಪ್ಪಾಣಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ತಾಲೂಕು ಸ್ಥಳೀಯ ಮಂಡಳಿಗಳು ಗಣೇಶ ಉತ್ಸವವನ್ನು ಆಚರಿಸುತ್ತಾ ಬಂದಿವೆ. ಆದರೆ, ಈ ಬಾರಿ ಕೊರೊನಾ ರೋಗದಿಂದ ಸ್ಥಳೀಯ ಮಂಡಳಿಗಳು ಕಟ್ಟುನಿಟ್ಟಾಗಿ ಆಚರಿಸಲು ನಿರ್ಧರಿಸಿವೆ.
ಪ್ರತಿ ವರ್ಷದಂತೆ ಈ ವರ್ಷ ಸಹ ಅನುಮತಿ ನೀಡಿ ಎಂದು ತಹಶೀಲ್ದಾರ್‌ರ ಕಚೇರಿಗೆ ಬಂದು ಮನವಿ ಸಲ್ಲಿಸಿ ಸರ್ಕಾರಕ್ಕೆ ಮಾಧ್ಯಮ ಮೂಲಕ ಒತ್ತಾಯಿಸಿದರು. ಶಿರಸ್ತೇದಾರ್ ಅಭಿಶೇಕ್ ಬೊಂಗಾಳೆ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಕಳುಹಿಸುವುದಾಗಿ ಹೇಳಿದರು.